ಪೇಟಿಎಂ ಭಾರತೀಯ ಡೆವಲಪರ್‌ಗಳಿಗಾಗಿ ತನ್ನ ಆಂಡ್ರಾಯ್ಡ್ ಮಿನಿ ಆಪ್ ಸ್ಟೋರ್ ಪರಿಚಯಿಸ್ತಾ ಇದೆ. ಇದು ಗೂಗಲ್‌ನ ಪ್ಲೇ ಸ್ಟೋರ್ ವಿರುದ್ಧದ ಯುದ್ಧದಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಈ ಮಿನಿ ಅಪ್ಲಿಕೇಶನ್‌ಗಳು ಪೂರ್ಣ ಪ್ರಮಾಣದ ಅಪ್ಲಿಕೇಶನ್ ಗಳಾಗಿರೋದಿಲ್ಲ. ಬದಲಿಗೆ ಅವು ವೆಬ್ ಅಪ್ಲಿಕೇಶನ್ ಆಗಿರುತ್ತೆ. ಜೊತೆಗೆ ಅವು ಸ್ಥಳೀಯ ಅಪ್ಲಿಕೇಶನ್‌ನಂತೆಯೇ ಕೆಲಸ ನಿರ್ವಹಿಸುತ್ತಿರುತ್ತದೆ. ಇದನ್ನ ಬಳಸುವವರು ತಮ್ಮ ಡೇಟಾ ಹಾಗೂ ಮೆಮೊರಿಯನ್ನ ಸೇವ್ ಮಾಡಬಹುದು ಅಂತ ಪೇಟಿಎಂ ಹೇಳಿಕೊಂಡಿದೆ.
ಪೇಟಿಎಂನ ಈ ನಿರ್ಧಾರ ಗೂಗಲ್ ಗೆ ಟಕ್ಕರ್ ಆಗಲಿದೆ. ಇನ್ನೂ ಈಗಾಗಲೇ ಗೂಗಲ್ ಪ್ಲೇಸ್ಟೋರ್‌ನಿಂದ ಪೇಟಿಎಂ ಅಪ್ಲಿಕೇಶನ್ ತೆಗೆದು ಹಾಕಿತ್ತು. ಪೇಟಿಎಂ ಜೂಜಿನ ನೀತಿಯನ್ನ ಉಲ್ಲಂಘನೆ ಮಾಡುತ್ತಿದೆ ಎಂದು ಗೂಗಲ್ ಆರೋಪಿಸಿದೆ.
ಕೇವಲ ಪೇಟಿಎಂ ಮಾತ್ರ ಅಲ್ಲ ಜೋಮ್ಯಾಟೋ ಹಾಗೂ ಸ್ವಿಗ್ಗಿ ಕೂಡಾ ಗೂಗಲ್ ಪ್ಲೇಸ್ಟೋರ್‌ನ ಈ ಕ್ರಮದಿಂದ ಅಸಂತುಷ್ಟಿಗೊಂಡಿತ್ತು. ಅದರಲ್ಲೂ ವಿಶೇಷಾಗಿ ಗೂಗಲ್ ಪ್ಲೇಸ್ಟೋರ್ ಕ್ಯಾಶ್‌ಬ್ಯಾಕ್ ಆಪ್ಷನ್ ತೆಗೆದು ಹಾಕಿತ್ತು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಗೂಗಲ್ ತೆಗೆದುಕೊಂಡ ನಿರ್ಧಾರ ಕಂಪನಿಗಳಿಗೆ ಸಾಕಷ್ಟು ನಷ್ಟ ತಂದಿದೆ. ಈಗ ಇದೇ ಕಾರಣಕ್ಕಾಗಿ ಪೇಟಿಎಂ ಭಾರತೀಯ ಡೆವಲಪರ್‌ಗಾಗಿಯೇ ಹೊಸ ಮಿನಿ ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿದೆ.