alex Certify ‘ಗೂಗಲ್ ಪೇ’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೂಗಲ್ ಪೇ’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಡಿಜಿಟಲ್ ಪಾವತಿ ವಿಧಾನ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಆರಂಭಿಸಿರುವ ಭೀಮ್ ಸೇರಿದಂತೆ ಪೇಟಿಎಂ, ಗೂಗಲ್ ಪೇ ಮೊದಲಾದವುಗಳು ಈ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿವೆ.

ಇದರ ಮಧ್ಯೆ ಗೂಗಲ್ ಪೇ ಆಪ್ ಅನಧಿಕೃತವಾಗಿದ್ದು, ಇದರ ಮೂಲಕ ನಡೆಯುವ ಹಣದ ವಹಿವಾಟಿಗೆ ಯಾವುದೇ ರಕ್ಷಣೆ ಇರುವುದಿಲ್ಲ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಇದೀಗ ರಾಷ್ಟ್ರೀಯ ಪಾವತಿ ನಿಗಮ ಈ ಕುರಿತು ಸ್ಪಷ್ಟನೆ ನೀಡಿದ್ದು, ಗೂಗಲ್ ಪೇ ಅನ್ನು ಥರ್ಡ್ ಪಾರ್ಟಿ ಆಪ್ ಪ್ರೊವೈಡರ್ ಎಂದು ವರ್ಗೀಕರಿಸಲಾಗಿದೆ. ಹೀಗಾಗಿ ಗೂಗಲ್ ಪೇ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಬಾರದು ಎಂದು ಬಳಕೆದಾರರಲ್ಲಿ ಮನವಿ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...