ಹಬ್ಬದ ಋತುವಿನಲ್ಲಿ ಎಲ್ಲ ಕಂಪನಿಗಳು ಆಫರ್ ನೀಡ್ತಿವೆ. ಬ್ಯಾಂಕ್ ಗಳು ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಗೃಹ ಸಾಲ,ವಾಹನ ಸಾಲ ಸೇರಿದಂತೆ ಅನೇಕ ಸಾಲಗಳಿಗೆ ಕಡಿಮೆ ಬಡ್ಡಿ ಆಫರ್ ನೀಡ್ತಿವೆ. ಹಬ್ಬದ ಸಂದರ್ಭದಲ್ಲಿ ಮನೆ ಖರೀದಿ ಮಾಡುವವರಿಗೆ ಟಾಟಾ ಹೌಸಿಂಗ್ ಉತ್ತಮ ಆಫರ್ ನೀಡ್ತಿದೆ.
ಟಾಟಾ ಹೌಸಿಂಗ್ ಶೇಕಡಾ 4ಕ್ಕಿಂತಲೂ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲದ ಆಫರ್ ನೀಡ್ತಿದೆ. ಟಾಟಾ ಹೌಸಿಂಗ್ ಯೋಜನೆ ಪ್ರಕಾರ ಮನೆ ಖರೀದಿದಾರರಿಗೆ ಶೇಕಡಾ 3.99ರಷ್ಟು ಬಡ್ಡಿ ದರದಲ್ಲಿ ಸಾಲ ಸಿಗ್ತಿದೆ. ಗ್ರಾಹಕರು ಒಂದು ವರ್ಷಕ್ಕೆ ಕೇವಲ 3.99 ಪ್ರತಿಶತದಷ್ಟು ಫ್ಲಾಟ್ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ. ಉಳಿದ ವೆಚ್ಚವನ್ನು ಟಾಟಾ ಹೌಸಿಂಗ್ ಭರಿಸಲಿದೆ ಎಂದು ಟಾಟಾ ಹೌಸಿಂಗ್ ಹೇಳಿದೆ. ಈ ಯೋಜನೆ ನವೆಂಬರ್ 20 ರವರೆಗೆ 10 ಯೋಜನೆಗಳಿಗೆ ಮಾನ್ಯವಾಗಲಿದೆ. ಗ್ರಾಹಕರಿಗೆ ಬುಕ್ಕಿಂಗ್ ನಂತ್ರ ಅವ್ರ ಆಸ್ತಿ ಆಧಾರದ ಮೇಲೆ 25 ಸಾವಿರದಿಂದ 8 ಲಕ್ಷದವರೆಗೆ ಗಿಫ್ಟ್ ವೋಚರ್ ಸಿಗಲಿದೆ.
ಕೊರೊನಾ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಮೇಲೆ ಪ್ರಭಾವ ಬೀರಿದೆ. ಕಳೆದ ಕೆಲ ತಿಂಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ಮತ್ತು ಆರ್ ಬಿ ಐ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮನೆ ಖರೀದಿದಾರರಿಗೆ ಸಹಾಯ ಮಾಡುವುದು ಈಗ ಖಾಸಗಿ ಕಂಪನಿ ಜವಾಬ್ದಾರಿ ಎಂದು ಟಾಟಾ ಹೌಸಿಂಗ್ ಹೇಳಿದೆ.