ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸುವ ಕುರಿತು ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಗಸ್ಟ್ 10ರಿಂದ ಇದು ಆರಂಭವಾಗಿದ್ದು, ಅಕ್ಟೋಬರ್ 9ರವರೆಗೆ ಮುಂದುವರೆಯಲಿದೆ.
ಪಾಲಿಸಿ ಪುನರುಜ್ಜೀವನಕ್ಕೆ ವಿಳಂಬ ಶುಲ್ಕದಲ್ಲಿ ರಿಯಾಯಿತಿ ಇದ್ದು, 1 ಲಕ್ಷದವರೆಗಿನ ಮೊತ್ತಕ್ಕೆ ಶೇಕಡ 20 ಅಥವಾ ಗರಿಷ್ಠ ರಿಯಾಯಿತಿ ಮಿತಿ 1500 ರೂಪಾಯಿ, 1,00,001 ರಿಂದ 3 ಲಕ್ಷದವರೆಗೆ ಶೇಕಡ 20 ಅಥವಾ ಗರಿಷ್ಠ ಮಿತಿ 2000 ರೂಪಾಯಿ ಹಾಗೂ 3,00,001 ಹಾಗೂ ಅದಕ್ಕೂ ಮೇಲ್ಪಟ್ಟ ಪಾಲಿಸಿಗಳಿಗೆ ಶೇಕಡಾ 30 ಅಥವಾ 2500 ರೂಪಾಯಿ ಗರಿಷ್ಠ ಮಿತಿ ರಿಯಾಯಿತಿ ಇರಲಿದೆ.
ಟರ್ಮ್ ಅಶ್ಯೂರೆನ್ಸ್, ಹೆಲ್ತ್ ಇನ್ಸೂರೆನ್ಸ್, ಮಲ್ಟಿಪಲ್ ರಿಸ್ಕ್ ಪಾಲಿಸಿಗಳು ಇತ್ಯಾದಿ ಹೈ ರಿಸ್ಕ್ ಪಾಲಿಸಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಲಾಗಿದ್ದು, ಸಂದಾಯ ಮಾಡಿಲ್ಲದ ಪ್ರಥಮ ಪ್ರೀಮಿಯಂ ನ ತಾರೀಖಿನಿಂದ ಐದು ವರ್ಷಗಳ ಒಳಗೆ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಬಹುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಕಚೇರಿಗೆ ಭೇಟಿ ನೀಡಬಹುದಾಗಿದೆ.