ಮಕ್ಕಳಿಂದ ಹಿಡಿದು ವೃದ್ಧರವರೆಗೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಅವಶ್ಯಕ. ಆಧಾರ್ ಕಾರ್ಡ್ ಒಮ್ಮೆ ಪಡೆದ್ರೆ ಆಗ್ಲಿಲ್ಲ. ವಿಳಾಸ, ಮೊಬೈಲ್ ಸಂಖ್ಯೆ ಬದಲಾದಂತೆ ಅದನ್ನು ನವೀಕರಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ನವೀಕರಣ ಅಂಚೆ ಕಚೇರಿ ಹಾಗೂ ಸೇವಾ ಕೇಂದ್ರದಲ್ಲಿ ಮಾಡಲಾಗುತ್ತೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಬ್ಯಾಂಕ್ ನ ಕೆಲ ಶಾಲೆಗಳಲ್ಲೂ ಆಧಾರ್ ಕಾರ್ಡ್ ನವೀಕರಣ ಮಾಡಬಹುದಾಗಿದೆ. ಯುಐಡಿಎಐ ಈ ಬಗ್ಗೆ ಮಾಹಿತಿ ನೀಡಿದೆ.
ಅಂಚೆ ಕಚೇರಿ ಹಾಗೂ ಸೇವಾ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಮೊದಲು ನಿಮ್ಮ ಹತ್ತಿರದ ಯಾವ ಬ್ಯಾಂಕ್ ಶಾಖೆಯಲ್ಲಿ ಆಧಾರ್ ನವೀಕರಣ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಬಹುತೇಕ ಬ್ಯಾಂಕ್ ಗಳು ತಮ್ಮ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿವೆ. ಆಧಾರ್ ನವೀಕರಣಕ್ಕೆ ನೀವು ಬ್ಯಾಂಕ್ ಗೆ ಹೋಗಬೇಕು.
ಬ್ಯಾಂಕ್ ಗೆ ಹೋದ್ಮೇಲೆ ಒಂದು ಫಾರ್ಮ್ ತುಂಬಬೇಕು. ಗುರುತು ಮತ್ತು ವಿಳಾಸದ ದಾಖಲೆಯ ನಕಲನ್ನು ನೀಡಬೇಕು. ನಂತ್ರ ಬ್ಯಾಂಕ್ ಅಧಿಕಾರಿಗಳು ನಿಮ್ಮ ವಿವರವನ್ನು ಆಧಾರ್ ನಲ್ಲಿ ನವೀಕರಿಸುತ್ತಾರೆ.
ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ, ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಬಯೋಮೆಟ್ರಿಕ್ ಗುರುತು, ಫೋಟೋವನ್ನು ನವೀಕರಿಸಬಹುದು. ಇಮೇಲ್ ವಿಳಾಸ, ಹೆಸರು, ವಿಳಾಸ, ಹುಟ್ಟಿದ ದಿನಾಂಕ ಅಥವಾ ವಯಸ್ಸು, ಲಿಂಗ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬ್ಯಾಂಕ್ ಗೆ 50 ರೂಪಾಯಿ ನೀಡಬೇಕು. ಆಧಾರ್ ವಿಳಾಸ ಬದಲಿಸಲು ನೀವು 44 ದಾಖಲೆಗಳಲ್ಲಿ ಒಂದನ್ನು ನೀಡಬಹುದು.