alex Certify ಗಮನಿಸಿ: ಪಾನ್ ಕಾರ್ಡ್ ಗೆ ʼಆಧಾರ್ʼ ಲಿಂಕ್ ಮಾಡದಿದ್ದರೆ ಸ್ಥಗಿತಗೊಳ್ಳಲಿದೆ ನಿಮ್ಮ ಪಾನ್ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಪಾನ್ ಕಾರ್ಡ್ ಗೆ ʼಆಧಾರ್ʼ ಲಿಂಕ್ ಮಾಡದಿದ್ದರೆ ಸ್ಥಗಿತಗೊಳ್ಳಲಿದೆ ನಿಮ್ಮ ಪಾನ್ ಸಂಖ್ಯೆ

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಹಲವು ದಿನಗಳೇ ಕಳೆದಿದೆ. ಈಗಾಗಲೇ ಹಲವು ಬಾರಿ ಆಧಾರ್ ಲಿಂಕ್ ಗಡುವು ವಿಸ್ತರಣೆಯನ್ನೂ ಮಾಡಿದೆ.

ಆದರೂ ಅನೇಕರು ಇನ್ನೂ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲ. ಇದೀಗ ಗಡುವಿನ ಅವಧಿ ಮುಗಿಯುತ್ತಾ ಬಂದಿದ್ದು, ಕೇವಲ 8 ದಿನಗಳ ಒಳಗಾಗಿ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ನೀಡದಿದ್ದರೆ ನಿಮ್ಮ ಪ್ಯಾನ್ ಸಂಖ್ಯೆ ಸ್ಥಗಿತಗೊಳ್ಳಲಿದೆ.

ಹೌದು. ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಮಾರ್ಚ್ 31 ಕೊನೇ ದಿನ. ಅಷ್ಟರಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ನೀಡದಿದ್ದಲ್ಲಿ ಪ್ಯಾನ್ ಸಂಖ್ಯೆ ಸ್ಥಗಿತಗೊಳ್ಳಲಿದ್ದು, ತೆರಿಗೆ ಇಲಾಖೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ಹಾಗಾದರೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ:

* https://www.incometaxindiaefiling.gov.in/home ವೆಬ್ ಸೈಟ್ ಗೆ ಭೇಟಿ ನೀಡಿ Link Aadhaar ಮೇಲೆ ಕ್ಲಿಕ್ ಮಾಡಿ. ಸಂಬಂಧಿಸಿದ ಮಾಹಿತಿಗಳನ್ನು ಫಿಲ್ ಅಪ್ ಮಾಡಿ ಸುಲಭವಾಗಿ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗುತ್ತದೆ.

ಮನೆ, ನಿವೇಶನ ಖರೀದಿಸುವವರು, ಮಾರಾಟಗಾರರಿಗೆ ಗುಡ್ ನ್ಯೂಸ್: ಇ –ಆಸ್ತಿ ಸಾಫ್ಟ್ ವೇರ್ ಜಾರಿ

* ಎಸ್ಎಂಎಸ್ ಮೂಲಕವೂ ಲಿಂಕ್ ಮಾಡಬಹುದಾಗಿದೆ. UIDPAN (12-digit Aadhaar Number) (10-digit PAN) and send it to 567678 ಅಥವಾ 56161 ಗೆ ಎಸ್ಎಂಎಸ್ ಮಾಡಿ.

* ಇಲ್ಲವೇ ತೆರಿಗೆ ಇಲಾಖೆಗೆ ಹೋಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಅರ್ಜಿ ನಮೂನೆ ತುಂಬಿಯೂ ಜೋಡಣೆ ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...