alex Certify ಗಮನಿಸಿ: ಇಂದಿನಿಂದ ಬದಲಾಗಿದೆ ವಸ್ತುಗಳ ಖರೀದಿ – ಮಾರಾಟ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಇಂದಿನಿಂದ ಬದಲಾಗಿದೆ ವಸ್ತುಗಳ ಖರೀದಿ – ಮಾರಾಟ ನಿಯಮ

ದೇಶದ ಇ-ಕಾಮರ್ಸ್ ಕಂಪನಿಗಳಿಗೆ ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಮೋದಿ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅಡಿಯಲ್ಲಿ ಅನ್ವಯವಾಗಲಿದೆ.

ಇ-ಕಾಮರ್ಸ್ ಕಂಪನಿಗಳು ಸಹ ಈಗ ಹೊಸ ನಿಯಮವನ್ನು ಅನುಸರಿಸಬೇಕಾಗುತ್ತದೆ. ಈ ಹೊಸ ಕಾನೂನಿನಲ್ಲಿ ಗ್ರಾಹಕರು ಈಗ ಮೊದಲಿಗಿಂತ ಹೆಚ್ಚಿನ ಹಕ್ಕುಗಳನ್ನು ಪಡೆಯುತ್ತಾರೆ. ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಪ್ರಕಾರ, ಇ-ಕಾಮರ್ಸ್ ಕಂಪನಿಗಳು ಸರಕುಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ವಿಧಾನವು ಬದಲಾಗಿದೆ.

ಈಗ ಇ-ಕಾಮರ್ಸ್ ಕಂಪನಿಗಳು ಸರಕು ಮತ್ತು ಸೇವೆಗಳ ಬೆಲೆಯೊಂದಿಗೆ ಎಲ್ಲಾ ರೀತಿಯ ಶುಲ್ಕಗಳ ವಿವರವನ್ನು ಗ್ರಾಹಕರಿಗೆ ತಿಳಿಸಬೇಕು. ಉತ್ಪನ್ನದ ಉತ್ಪಾದನಾ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ಬರೆಯಬೇಕು. ಉತ್ಪನ್ನ ಸಿದ್ಧವಾದ ದೇಶದ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿದೆ.

ಇ-ಕಾಮರ್ಸ್ ಕಂಪನಿಗಳು ನಿಯಮಕ್ಕೆ ವಿರುದ್ಧವಾಗಿ ಲಾಭ ಪಡೆಯುವಂತಿಲ್ಲ. ಇ-ಕಾಮರ್ಸ್ ಕಂಪನಿಗಳು ಪಾವತಿ ವಿಧಾನಗಳು ಮತ್ತು ಅದರ ಸುರಕ್ಷತೆಯನ್ನು ಖಾತರಿಪಡಿಸಬೇಕು. ಉತ್ಪನ್ನ ಮಾಹಿತಿಗಳಾದ ವಿಳಾಸ, ಸಂಪರ್ಕ ಸಂಖ್ಯೆ ಇ-ಕಾಮರ್ಸ್ ಕಂಪನಿಗಳಿಗೆ ಸಹ ಕಡ್ಡಾಯವಾಗಿರುತ್ತದೆ.

ಉತ್ಪನ್ನದ ರೇಟಿಂಗ್ ಕೂಡ ಸರಿಯಾಗಿರಬೇಕು. ಗ್ರಾಹಕರು ಉತ್ಪನ್ನಕ್ಕೆ ಸಂಬಂಧಿಸಿದ ದೂರು ನೀಡಲು ಬಯಸಿದರೆ, ಗ್ರಾಹಕರ ದೂರಿನ ಸಂಖ್ಯೆಯನ್ನು ಸಹ ವೆಬ್‌ಸೈಟ್‌ನಲ್ಲಿ ಹಾಕಬೇಕು. ಹೊಸ ನಿಯಮವು ದಂಡದ ಜೊತೆಗೆ ಶಿಕ್ಷೆಯನ್ನೂ ಸಹ ನೀಡುತ್ತದೆ.ಗ್ರಾಹಕ ವಸ್ತುಗಳನ್ನು ಕಾಯ್ದಿರಿಸಿ ನಂತ್ರ ರದ್ದುಗೊಳಿಸಿದ್ರೆ ಅದಕ್ಕೆ ಶುಲ್ಕ ವಿಧಿಸುವಂತಿಲ್ಲ. ಮರುಪಾವತಿ, ವಿನಿಮಯ, ಗ್ಯಾರಂಟಿ-ಖಾತರಿಯಂತಹ ಎಲ್ಲಾ ಮಾಹಿತಿಯನ್ನು ಇ-ಕಾಮರ್ಸ್ ಕಂಪನಿಗಳ ಪೋರ್ಟಲ್‌ನಲ್ಲಿ ಹೇಳಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...