alex Certify ಗಮನಿಸಿ: ಆಗಸ್ಟ್ 1 ರಿಂದ ಬದಲಾಗಲಿವೆ ಈ ʼನಿಯಮʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಆಗಸ್ಟ್ 1 ರಿಂದ ಬದಲಾಗಲಿವೆ ಈ ʼನಿಯಮʼ

ಆಗಸ್ಟ್ 1ರಿಂದ ಹಣಕಾಸಿನ ವಲಯದಲ್ಲಿ ಒಂದಿಷ್ಟು ಬದಲಾವಣೆ ಆಗುತ್ತವೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಕಾರು ಮತ್ತು ಬೈಕು ಖರೀದಿಯಲ್ಲಿ ರಿಲ್ಯಾಕ್ಸ್ ಸಿಗಬಹುದು. ಕಾರು ಅಥವಾ ಬೈಕು ಖರೀದಿ ಸ್ವಲ್ಪ ಅಗ್ಗವಾಗಬಹುದು. ಹಾಗೂ ಒಂದಿಷ್ಟು ನಿಯಮಗಳನ್ನು ಸಡಿಲ ಮಾಡಬಹುದಾಗಿದೆ.

ಇತ್ತ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಹಲವಾರು ಬದಲಾವಣೆ ಬ್ಯಾಂಕ್ ವಹಿವಾಟಿನಲ್ಲಿ ಆಗಬಹುದು. ಈ ವ್ಯವಹಾರಕ್ಕಾಗಿ ಕನಿಷ್ಟ ಬಾಕಿ ವಿಧಿಸಲಾಗುತ್ತದೆ. ಹಾಗೂ ಮೂರು ಬಾರಿ ಫ್ರೀ ವಹಿವಾಟಿನ ನಂತರ ಇದಕ್ಕೆ ಶುಲ್ಕ ವಿಧಿಸಲು ತೀರ್ಮಾನ ಮಾಡಲಾಗಿದೆ. ಈ ನಿಯಮಗಳು ಸೇರಿದಂತೆ ಇನ್ನಷ್ಟು ನಿಯಮಗಳನ್ನು ಬದಲಾವಣೆ ಮಾಡಲಾಗುತ್ತಿದೆ.

ಇನ್ನು, ಉಳಿತಾಯ ಖಾತೆಯಲ್ಲಿಯೂ ಹಲವು ಬದಲಾವಣೆ ತರಲಾಗುತ್ತಿದೆ. ಒಂದು ಲಕ್ಷ ರೂಪಾಯಿಗಳವರೆಗೆ ಉಳಿತಾಯ ಖಾತೆ ಠೇವಣಿಗಳಿಗೆ ವಾರ್ಷಿಕವಾಗಿ 4.75 ಶೇಕಡಾ ಬಡ್ಡಿಯನ್ನು ನೀಡಲಾಗುತ್ತದೆ. ಹಾಗೂ 1-10 ಲಕ್ಷವರೆಗಿನ ಠೇವಣಿಗಳ ಮೇಲೆ 6 ಪ್ರತಿಶತ ನೀಡಲಾಗುತ್ತದೆ. ಇತ್ತ ಹೊಸ ಡೆಬಿಟ್ ಕಾರ್ಡ್‌ಗಾಗಿ 200 ರೂಪಾಯಿ ನೀಡಬೇಕು ಮತ್ತು ಟೈಟಾನಿಯಂ ಡೆಬಿಟ್ ಕಾರ್ಡ್‌ಗಾಗಿ ವಾರ್ಷಿಕವಾಗಿ 250 ರೂಪಾಯಿ ನೀಡಬೇಕಾಗಿದೆ.

ಇ-ಕಾಮರ್ಸ್ ಉತ್ಪನ್ನದ ಮಾಹಿತಿಯನ್ನು ಕಡ್ಡಾಯವಾಗಿ ಕಂಪನಿ ಹಂಚಿಕೊಳ್ಳಬೇಕು. ಒಂದು ಉತ್ಪನ್ನ ಎಲ್ಲಿ ಮಾಡಿದ್ದು, ಯಾರು ಇದನ್ನು ಮಾಡಿದವರು ಎಂಬ ಮಾಹಿತಿ ಇರಬೇಕಾಗುತ್ತದೆ. ‌

ಹಾಗೆಯೇ ಆಗಸ್ಟ್ ತಿಂಗಳಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ರೈತರಿಗೆ ಸಿಗುವ ಹಣವನ್ನು ಅಂದರೆ ಆರನೇ ಕಂತಿನ ಹಣ 2000 ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಒಂದನೇ ತಾರೀಖು ತಮ್ಮ ಹೊಸ ಬೆಲೆಯನ್ನು ಹೇಳುತ್ತವೆ. ಹೀಗಾಗಿ ಆಗಸ್ಟ್ 1‌ ರಂದು ಕೂಡ ಹೊಸ ಬೆಲೆ ತಿಳಿಸಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...