ಕೊರೊನಾ ಮಹಾಮಾರಿ ದೇಶಕ್ಕೆ ಕಾಲಿಟ್ಟು ಏಳೆಂಟು ತಿಂಗಳುಗಳೇ ಆಗುತ್ತಿದೆ. ಈ ಮಧ್ಯೆ ಇದಕ್ಕೆ ಬೇಕಾದ ಲಸಿಕೆ ಅಥವಾ ಮದ್ದು ಇನ್ನೂ ಕಂಡು ಹಿಡಿದಿಲ್ಲ. ಅನೇಕ ರಾಷ್ಟ್ರಗಳು ಇದಕ್ಕೆ ಲಸಿಕೆ ಕಂಡು ಹಿಡಿಯುವಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾವೆ. ಇದರಲ್ಲಿ ಅಮೇರಿಕಾ ಮೂಲದ ಕಂಪನಿ ಕೂಡ ಒಂದು.
ಹೌದು, ಅಮೇರಿಕಾ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯೂ ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ಪ್ರಯತ್ನ ನಡೆಸಿತ್ತು. ಆದರೆ ಈ ಪ್ರಯತ್ನ ಇದೀಗ ಸ್ಥಗಿತಗೊಂಡಿದೆ. ಮೂರನೇ ಹಂತ ತಲುಪಿದ್ದ ಲಸಿಕೆ ಪ್ರಯೋಗ ಇದೀಗ ಸ್ಥಗಿತಗೊಂಡಿದೆ.
ಈ ಲಸಿಕೆಯನ್ನು 60 ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಪ್ರಯೋಗ ಮಾಡಿದವರಲ್ಲಿ ವಿವರಿಸಲಾಗದ ಕಾಯಿಲೆಗಳು ಕಂಡು ಬಂದಿದ್ದರಿಂದ ಈ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆಯಂತೆ. ಇದರಿಂದ ಬೇರೆ ತೊಂದರೆಯಾಗುತ್ತೆಂಬ ಮುನ್ನೆಚ್ಚರಿಕೆಯಿಂದ ಈ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿದೆ.