ಕೊರೊನಾ ಬಂದು ಎಲ್ಲರ ಜೀವನ ಅಸ್ತವ್ಯಸ್ತವಾಗಿದೆ. ಕೆಲವರು ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವರು ನಿತ್ಯದ ಜೀವನ ನಡೆಸುವುದೇ ಕಷ್ಟಕರ ಎಂದು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಇಂತಹ ಸಂದರ್ಭವನ್ನು ಎದುರಿಸುವ ಧೈರ್ಯ ಮನಸ್ಸಿನಲ್ಲಿ ಬೆಳೆಸಿಕೊಂಡರೆ ಎಲ್ಲವೂ ಸುಲಭವಾಗುತ್ತದೆ.
ಕೆಲವರಿಗೆ ಇಷ್ಟು ದಿನ ಮಾಡುತ್ತಿದ್ದ ಕೆಲಸ ಈಗ ಇಲ್ಲದೇ ಹೋಗಿರಬಹುದು. ಅಲ್ಲದೇ ಕೆಲವು ಕಂಪೆನಿಗಳು ಮುಚ್ಚಿ ಕೂಡ ಹೋಗಿರಬಹುದು. ಈ ಸಂದರ್ಭದಲ್ಲಿ ದುಡುಕಿ ಏನೇನೋ ಯೋಚನೆ ಮಾಡುವ ಬದಲು ಪರ್ಯಾಯ ದಾರಿ ಯಾವುದು ಇದೆ ಎಂದು ಯೋಚಿಸಿ. ಹಾಗೇ ನಿಮ್ಮ ಸಮಸ್ಯೆಯನ್ನು ನಿಮ್ಮ ಕುಟುಂಬದವರ ಜತೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳಿ.
ಇನ್ನು ಸಂಸಾರ ಎಂದ ಮೇಲೆ ಗಂಡ-ಹೆಂಡತಿ ಇಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಮಹಿಳೆಯರು ಕೂಡ ಮನೆಯಲ್ಲಿ ಏನಾದರು ಸಣ್ಣಪುಟ್ಟ ಕೆಲಸ ಮಾಡುವುದನ್ನು ಕಲಿತರೆ ಜೀವನ ನಡೆಸುವುದಕ್ಕೆ ಸಹಾಯವಾಗುತ್ತದೆ. ಹೊಲಿಗೆ, ಕಸೂತಿಯಂತಹ ವಿದ್ಯೆ ನಿಮಗೆ ಗೊತ್ತಿದ್ದರೆ ನಾಲ್ಕು ಜನರ ಬಳಿ ಅದರ ಬಗ್ಗೆ ಹೇಳಿ. ಯಾರಿಗಾದರೂ ಕ್ಲಾಸ್ ಹೀಳಿಕೊಡಿ. ಆನ್ ಲೈನ್ ನಲ್ಲೂ ನೀವು ಹೊಲಿದ ಬಟ್ಟೆಗಳನ್ನು ಮಾರಾಟ ಮಾಡಬಹುದು.
ಇನ್ನು ಎಷ್ಟು ಅಗತ್ಯವಿದೆಯೋ ಅಷ್ಟು ವಸ್ತುಗಳನ್ನು ಮಾತ್ರ ತೆಗೆದುಕೊಳ್ಳಿ. ಅನಗತ್ಯ ವಸ್ತುವಿಗೆ ಸುಮ್ಮನೇ ದುಡ್ಡು ಸುರಿಯಬೇಡಿ.
ಮನೆಗೆ ಬೇಕಾಗುವ ತರಕಾರಿ, ಹಣ್ಣುಗಳನ್ನು ಆದಷ್ಟು ಹಿತಮಿತವಾಗಿ ಬಳಸಿ. ಹಾಳು ಮಾಡುವ ಮೊದಲು ಯೋಚಿಸಿ. ಮನೆಯ ಸುತ್ತಮುತ್ತ ಜಾಗವಿದ್ದರೆ ಕೆಲವೊಂದು ತರಕಾರಿಗಳನ್ನು ಮನೆಯಂಗಳದಲ್ಲೇ ಬೆಳೆಸಿ ಉಪಯೋಗಿಸಿ.