ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು ಹೆಚ್ಚಾಗಿದೆ. ಇದ್ರಲ್ಲಿ ಸ್ಯಾಮ್‌ಸಂಗ್ ಮೊದಲ ಸ್ಥಾನದಲ್ಲಿದೆ.
ಈ ವರ್ಷ ಸ್ಯಾಮ್ ಸಂಗ್ ನ ಪ್ರೀಮಿಯಂ ಫೋನ್‌ಗಳ ಮಾರಾಟ ಹೆಚ್ಚಾಗಿದೆ. ದಕ್ಷಿಣ ಕೊರಿಯಾದ ಬ್ರ್ಯಾಂಡ್ ಸ್ಯಾಮ್ ಸಂಗ್ ಶೇಕಡಾ 37 ರಷ್ಟು ಪಾಲನ್ನು ಪಡೆದು ಪ್ರಥಮ ಸ್ಥಾನದಲ್ಲಿದೆ. ಆಪಲ್ ಶೇಕಡಾ 26 ರಷ್ಟು ಪಾಲನ್ನು ಹೊಂದಿ ಎರಡನೇ ಸ್ಥಾನ ಹಾಗೂ ಚೀನಾದ ಕಂಪನಿ ಒನ್‌ಪ್ಲಸ್ ಶೇಕಡಾ 15 ರಷ್ಟು ಪಾಲನ್ನು ಹೊಂದಿ ಮೂರನೇ ಸ್ಥಾನದಲ್ಲಿದೆ.
ಕೊರೊನಾ ಕಾಲದಲ್ಲೂ ಪ್ರೀಮಿಯಂ ಫೋನ್ ಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಗ್ಯಾಲಕ್ಸಿ ಎ 71 ಪ್ರೀಮಿಯಂ ವಿಭಾಗದಲ್ಲಿ ಹೆಚ್ಚು ಮಾರಾಟವಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಒಪ್ಪೊ ಮತ್ತು ಶಿಯೋಮಿಯಂತಹ ಕಂಪನಿಗಳು ಸಹ ಈ ಸ್ಪರ್ಧೆಯಲ್ಲಿ ಸೇರಿವೆ.