ಮೈಸೂರು: ಕೊರೊನಾ ಸೋಂಕಿಗೆ ಮನೆ ಮದ್ದು, ಕಷಾಯ, ಆಯುರ್ವೇದ ಔಷಧಗಳು ಹೆಚ್ಚು ಪರಿಣಾಮಕಾರಿ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ವೈದ್ಯರು ಕೂಡ ಈ ಬಗ್ಗೆ ಹೆಚ್ಚು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ಇದೀಗ ಕೆಎಂಎಫ್ ಆಯುರ್ವೇದಿಕ್ ಹಾಲು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ಕೊರೊನಾ 2ನೇ ಅಲೆಯಂತಹ ಈ ಸಂದರ್ಭಗಳಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಗತ್ಯವಿದೆ. ಹೀಗಾಗಿ ಆಯುರ್ವೇದಿಕ್ ಔಷಧೀಯ ಗುಣಗಳಿಂದ ಇದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಶುಂಠಿ, ತುಳಸಿ, ಅಶ್ವಗಂಧ, ಕಾಳುಮೆಣಸು, ಲವಂಗ, ಅರಿಷಿಣ ಸೇರಿದಂತೆ ಕಷಾಯದ ಅಂಶಗಳುಳ್ಳ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ.
ಇನ್ಮುಂದೆ 60 ನಿಮಿಷದಲ್ಲಿ ಕ್ಲಿಯರ್ ಆಗಲಿದೆ ಕ್ಯಾಶ್ ಲೆಸ್ ಆರೋಗ್ಯ ವಿಮೆ
200 ಮಿ.ಲೀ. ಬಾಟಲ್ ಗೆ 20 ರೂಪಾಯಿ ನಿಗದಿ ಮಾಡಲಾಗಿದ್ದು, ನಂದಿನಿ ಬೂತ್ ಗಳಲ್ಲಿ ಈ ಆಯುರ್ವೇದಿಕ್ ಹಾಲು ಲಭ್ಯವಿದೆ. ಜನರ ಆರೋಗ್ಯದ ದೃಷ್ಟಿಯಿಂದ ಹೊರತಂದಿರುವ ಆಯುರ್ವೇದ ಗುಣವುಳ್ಳ ಪ್ರೋಟಿನ್ ಮಿಲ್ಕ್ ಇದಾಗಿದ್ದು, 6 ತಿಂಗಳವರೆಗೆ ಬಳಕೆಗೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.