ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ. ಹಿಂದಿನ ವಹಿವಾಟಿನ ದಿನದಂದು ದೊಡ್ಡ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಬುಧವಾರ ಮತ್ತೆ ಲಯಕ್ಕೆ ಮರಳಿದೆ. ಆರಂಭಿಕ ವಹಿವಾಟಿನಲ್ಲಿ, ಸೆನ್ಸೆಕ್ಸ್ 400 ಪಾಯಿಂಟ್‌ಗಳಷ್ಟು ಏರಿ 36,500 ಅಂಕದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 130 ಪಾಯಿಂಟ್ ಗಳ ಲಾಭದೊಂದಿಗೆ 10,750 ಅಂಕದಲ್ಲಿ ವಹಿವಾಟು ನಡೆಸುತ್ತಿದೆ.
ಬುಧವಾರ ಮಾರುಕಟ್ಟೆಯ ಏರಿಕೆಗೆ ಕೊರೊನಾ ಲಸಿಕೆ ಬಗ್ಗೆ ಬಂದ ಒಳ್ಳೆಯ ಸುದ್ದಿ ಕಾರಣ. ವಾಸ್ತವವಾಗಿ, ಮಾಡರ್ನಾ ಇಂಕ್‌ನ ಕೋವಿಡ್ -19 ಲಸಿಕೆಯ ಮೊದಲ ಎರಡು ಪ್ರಯೋಗಗಳನ್ನು ಯುಎಸ್‌ನಲ್ಲಿ ಮಾಡಲಾಗಿದೆ. ಈ ಪ್ರಯೋಗದ ಫಲಿತಾಂಶದಿಂದ ವಿಜ್ಞಾನಿಗಳು ಸಂತೋಷಗೊಂಡಿದ್ದಾರೆ. ಈಗ ಈ ಲಸಿಕೆಯ ಅಂತಿಮ ಪರೀಕ್ಷೆಯನ್ನು ಮಾಡಲಾಗುವುದು. ಈ ಲಸಿಕೆ ವಿಜ್ಞಾನಿಗಳು ನಿರೀಕ್ಷಿಸಿದಂತೆಯೇ ಜನರ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಕೆಲಸ ಮಾಡಿದೆ ಎಂದು ಮಂಗಳವಾರದ ವರದಿಯಲ್ಲಿ ಹೇಳಲಾಗಿದೆ.
ಕೊರೊನಾ ಲಸಿಕೆ ಬಗ್ಗೆ ಒಳ್ಳೆ ಸುದ್ದಿ ಬರ್ತಿದ್ದಂತೆ ಅದ್ರ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಕಾಣಿಸಿದೆ. ದೇಶದ ಐಟಿ ದೈತ್ಯ ಇನ್ಫೋಸಿಸ್‌ನ ತ್ರೈಮಾಸಿಕ ಫಲಿತಾಂಶಗಳು ಇಂದು ಬರಲಿವೆ. ಕೊರೊನಾ ಕಂಪನಿಯ ಫಲಿತಾಂಶಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆಯಿದೆ.