ನವದೆಹಲಿ: ಕೇವಲ 12 ರೂಪಾಯಿಗೆ ಇಂದು ಏನು ಸಿಗಲು ಸಾಧ್ಯ ಎಂದು ಕೇಳುವವರಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಉತ್ತರವಾಗಿದೆ. ಕೇವಲ 12 ರೂಪಾಯಿ 2 ಲಕ್ಷ ರೂಪಾಯಿಗಳ ಲಾಭವನ್ನು ನೀಡಬಹುದು ಎಂಬುದಕ್ಕೆ ಈ ಯೋಜನೆ ಸಾಕ್ಷಿ.
ಬಡ ಜನರಿಗಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ವಾರ್ಷಿಕ 12 ರೂಪಾಯಿ ಪ್ರೀಮಿಯಮ್ ಠೇವಣಿ ಇರಿಸುವುದರಿಂದ ಸರ್ಕಾರದಿಂದ 2 ಲಕ್ಷ ರೂ ವರೆಗೆ ಮರಣ ವಿಮೆ ಖಾತರಿ ಪಡೆಯಬಹುದು.
ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಈಡೇರದ ಬೇಡಿಕೆ, ಮತ್ತೆ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ
ಈ ಯೋಜನೆಯಡಿ ವಿಮೆ ಮಾಡಿದವರು ಯವುದೇ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬ ಸದಸ್ಯರು 2 ಲಕ್ಷ ರೂ ಪಡೆಯುತ್ತಾರೆ. ಈ ಯೋಜನೆಯ ವಿಮಾ ಹೊಂದಿರುವವರ ಸಾವಿಗೆ ಅಥವಾ ಅವನು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ 2 ಲಕ್ಷ ರೂ. ವಿಮಾ ಪರಿಹಾರ ಹೊಂದಿದವರು ಈ ಯೋಜನೆಯಡಿ 18-70 ವರ್ಷ ವಯಸ್ಸಿನ ಯಾರಾದರೂ ಭಾಗಶ: ಅಂಗವಿಕಲರಾಗಿದ್ದರೆ ಅವರಿಗೆ 1 ಲಕ್ಷ ರೂ. ರಕ್ಷಣೆ ಪಡೆಯಬಹುದು.