
ಇದೀಗ ಖ್ಯಾತ ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೋ ಸ್ಥಾಪಕ ದೀಪಿಂದರ್ ಗೋಯಲ್ ಅವರು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಕೇವಲ 10 ನಿಮಿಷದಲ್ಲಿ ಮ್ಯಾಗಿಯನ್ನು ನಿಮ್ಮ ಮನೆಗೆ ತಲುಪಿಸಲಾಗುವುದು ಎಂದ ಟ್ವೀಟ್ ಮಾಡಿದ್ದಾರೆ.
ಗೋಯಲ್ ಅವರ ಟ್ವೀಟ್ ಗೆ ನೆಟ್ಟಿಗರು ಪ್ರಭಾವಿತರಾದಂತೆ ಕಂಡಿಲ್ಲ. ಅವರ ನಿಲುವನ್ನು ಆನ್ಲೈನ್ ನಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ. ಶೀಘ್ರದಲ್ಲೇ, ದೀಪಿಂದರ್ ಗೋಯಲ್ ಅವರು ಝೊಮಾಟೊ ತನ್ನ ವಿತರಣಾ ಪಾಲುದಾರರ ಮೇಲೆ ಆಹಾರವನ್ನು ವೇಗವಾಗಿ ತಲುಪಿಸಲು ಯಾವುದೇ ಒತ್ತಡವನ್ನು ಹೇರುತ್ತಿಲ್ಲ ಎಂದು ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
10 ನಿಮಿಷದಲ್ಲಿ ಮ್ಯಾಗಿಯನ್ನು ತಲುಪಿಸಲಾಗುವುದು ಎಂಬ ಗೋಯಲ್ ಟ್ವೀಟ್ ನಂತರ ಅದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಮ್ಯಾಗಿಯನ್ನು ವಿತರಿಸುವ ಬದಲು ಮನೆಯಲ್ಲಿಯೇ ಅದನ್ನು ಹೆಚ್ಚು ವೇಗವಾಗಿ ಮಾಡಬಹುದು ಎಂದು ಬಳಕೆದಾರರು ಹೇಳಿದ್ದಾರೆ. ಹಲವಾರು ಮಂದಿ ತಮ್ಮದೇ ಆದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ.
https://twitter.com/KaveriGopakumar/status/1506231431634190346?ref_src=twsrc%5Etfw%7Ctwcamp%5Etweetembed%7Ctwterm%5E1506231431634190346%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmaggi-trends-on-twitter-after-zomato-announces-it-will-be-delivered-in-10-minutes-see-reactions-1928200-2022-03-22