ಜನತೆಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ಅದರಲ್ಲೂ ಲಾಕ್ ಡೌನ್ ಸಮಯದಲ್ಲಂತೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಮತ್ತೊಂದು ಯೋಜನೆ ಜನಪರವಾಗಿದೆ. ಕೇವಲ 42 ರೂಪಾಯಿಗಳ ಪ್ರೀಮಿಯಂನಲ್ಲಿ ಪಿಂಚಣಿ ಯೋಜನೆಯ ಲಾಭ ಪಡೆಯಬಹುದಾಗಿದೆ.
ಹೌದು, ಇದು ವಯೋವೃದ್ಧರಿಗಷ್ಟೆ ಸೀಮಿತವಾಗಿಲ್ಲ. ಬದಲಾಗಿ 18 ರಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯನ್ನು ಪಡೆಯಬಹುದು. ಸರ್ಕಾರದ ಅನೇಕ ಪಿಂಚಣಿ ಯೋಜನೆಗಳ ಪೈಕಿ ಅಟಲ್ ಪಿಂಚಣಿ ಯೋಜನೆ ಕೂಡ ಒಂದು. ಇಲ್ಲಿ ಕೇವಲ 42 ರೂಪಾಯಿಗಳ ಮೂಲಕ ಪಿಂಚಣಿ ಯೋಜನೆಯ ಲಾಭ ಪಡೆಯಬಹುದಾಗಿದೆ.
ನಿಮಗೆ 18 ವರ್ಷ ವಯಸ್ಸಾಗಿದ್ದರೆ 60 ವರ್ಷಗಳ ಬಳಿಕ ಮಾಸಿಕ 1000 ರೂಪಾಯಿ ಪಿಂಚಣಿ ಪಡೆಯಬೇಕು ಎಂದರೆ ನೀವು ಮಾಸಿಕ 42 ರೂಪಾಯಿ ಪಾವತಿಸಬೇಕು. 5000 ರೂಪಾಯಿ ಪಿಂಚಣಿಗಾಗಿ, 60 ವರ್ಷಗಳು ಪೂರ್ಣಗೊಳ್ಳುವವರೆಗೆ, ನೀವು ತಿಂಗಳಿಗೆ 210 ರೂಪಾಯಿ ಪಾವತಿಸಬೇಕು. ನೀವು 40 ವರ್ಷ ವಯಸ್ಸಿನವರಾಗಿದ್ದರೆ, 1000 ರೂಪಾಯಿ ಪಿಂಚಣಿಗೆ 291 ರೂಪಾಯಿ ಹಾಗೂ 5 ಸಾವಿರ ಪಿಂಚಣಿಗೆ 1454 ರೂ. ಪಾವತಿಸಬೇಕು. ಇನ್ನು ದುರಾದೃಷ್ಟವಶಾತ್ ಚಂದಾದಾರರು ಆಕಸ್ಮಿಕ ಸಾವನ್ನಪ್ಪಿದರೆ ನಾಮಿನಿಗೆ 8.5 ಲಕ್ಷ ರೂಪಾಯಿಗಳು ದೊರೆಯಲಿದೆ.