ಭಾರತದಲ್ಲಿ ಕಿರಾಣಿ ಅಂಗಡಿಗಳಿಗೇನು ಕಡಿಮೆ ಇಲ್ಲ. ಒಂದಿಷ್ಟು ವರ್ಗದ ಜನರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಮಂದಿ ಕಿರಾಣಿ ಅಂಗಡಿಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಇದೀಗ ಈ ಕಿರಾಣಿ ಅಂಗಡಿಗಳ ಜೊತೆಗೂಡಿ ಡಿಜಿಟಲ್ ಮಾದರಿಯಲ್ಲಿ ಕೆಲಸ ಮಾಡಲು ಜಿಯೋ ರಿಲಾಯನ್ಸ್ ಮುಂದಾಗಿದೆ.
ಹೌದು, ಫೇಸ್‌ಬುಕ್ ಜೊತೆಗೂಡಿ ವಾಟ್ಸಾಪ್‌ನಲ್ಲಿ ಹೊಸ ಡಿಜಿಟಲ್ ಸೇವೆಯನ್ನು ಆರಂಭಿಸಲು ರಿಲಾಯನ್ಸ್ ಜಿಯೋ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ನೇರವಾಗಿ ಡಿಜಿಟಲ್ ಮೂಲಕ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ನೀಡಲು ಮುಂದಾಗುತ್ತಿದೆ. ಹೀಗಾಗಿ ಈ ಸೇವೆ ಪಡೆಯಲು ಕಿರಾಣಿ ಅಂಗಡಿಯವರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕಿರಾಣಿ ಅಂಗಡಿಯವರು ಡಿಜಿಟಲ್ ಮೂಲಕ ರಿಲಾಯನ್ಸ್ ಜಿಯೋ ಜೊತೆಗೆ ವ್ಯವಹಾರ ಮಾಡಬಹುದು. ಒಂದು ಬಟನ್ ಹೊತ್ತುವ ಮೂಲಕ ಬೇಕಾದ ವಸ್ತು ಒದಗಿಸುತ್ತದೆ. ಹಾಗೂ ಕಿರಾಣಿ ಅಂಗಡಿಗಳು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸಲು ರಿಲಾಯನ್ಸ್ ಮುಂದಾಗಿದೆ.