ಕಾರ್ಪೊರೇಷನ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕ್ ಗ್ರಾಹಕರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಈ ಎರಡೂ ಬ್ಯಾಂಕ್ ಗಳು ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಂಡಿರುವ ಕಾರಣ ಇವುಗಳ ಐಎಫ್ಎಸ್ಸಿ ಕೋಡ್ ಬದಲಾಗಿದೆ.
ಕಾರ್ಪೊರೇಷನ್ ಬ್ಯಾಂಕ್ ಐಎಫ್ಎಸ್ಸಿ ಕೋಡ್ UBIN09 ನಿಂದ ಆರಂಭವಾಗಲಿದ್ದರೆ, ಆಂಧ್ರ ಬ್ಯಾಂಕ್ ಐಎಫ್ಎಸ್ಸಿ ಕೋಡ್ UBIN08 ರಿಂದ ಆರಂಭವಾಗಲಿದೆ. ಆದರೆ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಳೆಯ ಐಎಫ್ಎಸ್ಸಿ ಕೋಡ್ ಏಪ್ರಿಲ್ 1ರಿಂದ ಬಳಕೆಯಲ್ಲಿ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಪರೀಕ್ಷೆ ಮುಗಿದ 24 ಗಂಟೆಗಳಲ್ಲೇ ಫಲಿತಾಂಶ: RGUHS ನಿಂದ ವಿಶಿಷ್ಟ ದಾಖಲೆ
ಗ್ರಾಹಕರು ಐಎಫ್ಎಸ್ಸಿ ಕೋಡ್ ಪಡೆಯಲು IFSC<OLD IFSC>ಎಂದು ಟೈಪ್ ಮಾಡಿ 092223008486 ಮೊಬೈಲ್ ಸಂಖ್ಯೆ ಗೆ ಎಸ್ಎಂಎಸ್ ಕಳುಹಿಸಬೇಕು. ಇಲ್ಲವೇ ಗ್ರಾಹಕ ಸೇವಾ ಕೇಂದ್ರ 1800-208-2244/1800-425-1515ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವೆಬ್ಸೈಟ್ www.unionbankofindia.co.in ಗೆ ಭೇಟಿ ನೀಡಿ ಐಎಫ್ಎಸ್ಸಿ ಕೋಡ್ ತಿಳಿದುಕೊಳ್ಳಬಹುದಾಗಿದೆ.