ಟಾಟಾ ಮೋಟಾರ್ಸ್ ಕಂಪನಿಯ ಟಿಯಾಗೋ ಎಲೆಕ್ಟ್ರಿಕ್ ವೆಹಿಕಲ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಹೊಸ ಟಿಯಾಗೋ ಇವಿ ಲಾಂಚ್ ಅನ್ನು ಈಗಾಗ್ಲೇ ಟಾಟಾ ಮೋಟಾರ್ಸ್ ಖಚಿತಪಡಿಸಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈ ಕಾರಿನ ಬೆಲೆ ನಿಗದಿ ಮಾಡಲು ಟಾಟಾ ಮೋಟಾರ್ಸ್ ಮುಂದಾಗಿದೆ.
2018ರ ಆಟೋ ಎಕ್ಸ್‌ಪೋನಲ್ಲಿ ಟಾಟಾ ಟಿಯಾಗೋ ಇವಿಯನ್ನು ಲಾಂಚ್ ಮಾಡುವುದಾಗಿ ಪ್ರಕಟಿಸಲಾಗಿತ್ತು. ಆದ್ರೆ ಟಾಟಾ ಮೋಟಾರ್ಸ್ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ರಸ್ತೆಗಿಳಿಸಿರಲಿಲ್ಲ. ಅದರ ಬದಲಾಗಿ ನೆಕ್ಸಾನ್ ಇವಿ ಪ್ರೈಮ್, ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಟೈಗರ್ ಇವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ವಿಶ್ವ ಇವಿ ದಿನದಂದೇ ಟಿಯಾಗೋ ಎಲೆಕ್ಟ್ರಿಕ್ ವೆಹಿಕಲ್ ಬಿಡುಗಡೆ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಟಿಯಾಗೋ ಇವಿಯ ವೈಶಿಷ್ಟ್ಯಗಳ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಟೈಗರ್ ಇವಿ ಸೆಡಾನ್ ಆಗಿದ್ದರೆ, ನೆಕ್ಸಾನ್ ಇವಿ ಎಸ್‌ಯುವಿ ರೂಪದಲ್ಲಿದೆ. ಟಿಯಾಗೋ ಇವಿ ಹ್ಯಾಚ್‌ಬ್ಯಾಕ್ ಆಗಿರಲಿದೆ ಅನ್ನೊ ನಿರೀಕ್ಷೆ ಇದೆ. ಜಿಪ್ಟ್ರಾನ್ ಟೆಕ್ನಾಲಜಿಯನ್ನೇ ಇದಕ್ಕೂ ಅಳವಡಿಸುವ ಸಾಧ್ಯತೆ ಇದೆ. ಸಾಮಾನ್ಯ ಟಿಯಾಗೋ ಕಾರು ಹಾಗೂ ಟಿಯಾಗೋ ಇವಿ ಮಧ್ಯೆ ಆಕಾರದಲ್ಲೇನೂ ಬದಲಾವಣೆ ಇರುವುದಿಲ್ಲ. ಟೀಲ್ ಬ್ಲೂ ಹಾಗೂ ಡೇಟೋನಾ ಗ್ರೇ ಬಣ್ಣಗಳಲ್ಲಿ ಇದು ಲಭ್ಯವಾಗಲಿದೆ. ಹೊರ ಮತ್ತು ಒಳಭಾಗವೆಲ್ಲ ನೀಲಿ ಬಣ್ಣದಲ್ಲಿರಲಿದೆ.