ಟಾಟಾ ಮೋಟರ್ಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ದೇಶದ ಪ್ರಸಿದ್ಧ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಈ ಘೋಷಣೆ ಮಾಡಿದೆ. ಪ್ರಯಾಣಿಕ ವಾಹನವನ್ನು ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಯೊಂದಿಗೆ ನೀಡ್ತಿದೆ. ಒಂದು ಲಕ್ಷಕ್ಕೆ ಪ್ರತಿ ತಿಂಗಳು 789 ರೂಪಾಯಿಗಿಂತ ಕಡಿಮೆ ಇಎಂಐ ಪಾವತಿಸಬೇಕಾಗುತ್ತದೆ.
ಕನಿಷ್ಠ ಇಎಂಐ ಪಾವತಿ ಅವಕಾಶವಿದ್ದು, ಗ್ರಾಹಕರು ವರ್ಷದಲ್ಲಿ ಮೂರು ತಿಂಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಕಂಪನಿ ಎರಡು ಯೋಜನೆಗಳನ್ನ ಜಾರಿಗೆ ತಂದಿದೆ. ಬ್ಯಾಂಕ್ ಸಹಯೋಗದೊಂದಿಗೆ ಕಂಪನಿ ಈ ಯೋಜನೆ ಬಿಡುಗಡೆ ಮಾಡಿದೆ. ಗ್ರಾಜುವಲ್ ಸ್ಟೆಪ್ ಅಪ್ ಸ್ಕೀಮ್ ಮತ್ತು ಟಿಎಂಎಲ್ ಫ್ಲೆಕ್ಸಿ ಡ್ರೈವ್ ಎಂದು ಕಂಪನಿ ಯೋಜನೆಗೆ ಹೆಸರಿಟ್ಟಿದೆ. ಈ ಎರಡೂ ಯೋಜನೆ ನವೆಂಬರ್ 2020ರ ಅಂತ್ಯದವರೆಗೆ ಲಭ್ಯವಿರಲಿದೆ.
ಈ ಆಫರ್ ಅಡಿ ಗ್ರಾಹಕರು ಅತ್ಯಾಕರ್ಷಕ ಬಡ್ಡಿ ದರದ ಕೊಡುಗೆ ಪಡೆಯಲಿದ್ದಾರೆ. ಉತ್ಪನ್ನದ ಆಧಾರದ ಮೇಲೆ 1 ಲಕ್ಷ ರೂಪಾಯಿಗೆ 799 ರೂಪಾಯಿಗಿಂತ ಕಡಿಮೆ ಇಎಂಐ ಆಯ್ಕೆಯನ್ನು ಪಡೆಯಬಹುದು. ಖರೀದಿದಾರನ ಪಾವತಿಗೆ ಅನುಗುಣವಾಗಿ ಎರಡು ವರ್ಷದ ಇಎಂಐ ಅವಧಿಯಲ್ಲಿ ಕ್ರಮೇಣ ಇಎಂಐ ಹೆಚ್ಚಾಗಲಿದೆ.