ಕೊರೊನಾ ಕಾಲದಲ್ಲಿ ಸಾರ್ವಜನಿಕ ಸಾರಿಗೆ ಏರಲು ಜನ ಹಿಂದೇಟು ಹಾಕುತ್ತಿದ್ದಾರೆ. ಸೋಂಕು ತಮಗೆಲ್ಲಿ ತಗುಲುವುದೋ ಎಂಬ ಭಯವೇ ಇದಕ್ಕೆ ಕಾರಣ. ಹೀಗಾಗಿ ಓಡಾಟಕ್ಕೆ ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ.
ಇಬ್ಬರಿಗಾದರೆ ಬೈಕ್ ಓಕೆ. ಆದರೆ ಅದಕ್ಕಿಂತ ಹೆಚ್ಚಿನ ಜನ ಪ್ರಯಾಣಿಸಬೇಕಾದರೆ ಕಾರು ಬೇಕಾಗುತ್ತದೆ. ಹೀಗಾಗಿ ಲಾಕ್ಡೌನ್ ಸಡಿಲಿಕೆ ಬಳಿಕ ಕಾರು ಮಾರಾಟದಲ್ಲಿ ತೀವ್ರ ಹೆಚ್ಚಳ ಕಂಡಿದೆ.
ಇದರ ಮಧ್ಯೆ ಕಾರು ಖರೀದಿದಾರರಿಗೆ ದೇಶದ ಪ್ರಮುಖ ಆಟೋಮೊಬೈಲ್ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಭರ್ಜರಿ ಬಂಪರ್ ಆಫರ್ ನೀಡುತ್ತಿದೆ. ಹೌದು, ಶೂನ್ಯ ಡೌನ್ ಪೇಮೆಂಟ್ ನಲ್ಲಿ ಟಿಯಾಗೋ, ನೆಕ್ಸನ್ ಮತ್ತು ಆಲ್ ಟ್ರೋಜಾ ಕಾರುಗಳನ್ನು ಖರೀದಿಸಿಬಹುದಾಗಿದ್ದು, ಜೊತೆಗೆ ಆರು ತಿಂಗಳವರೆಗೆ ಇಎಂಐ ರಜೆ ಪಡೆಯಬಹುದಾಗಿದೆ.
ಆರು ತಿಂಗಳವರೆಗಿನ ಇಎಂಐ ರಜೆ ಅವಧಿಯಲ್ಲಿ ಮಾಸಿಕ ಬಡ್ಡಿ ಮಾತ್ರ ಪಾವತಿಸುವ ಅವಕಾಶ ನೀಡುತ್ತಿದ್ದು, ಕರೂರ್ ವೈಶ್ಯ ಬ್ಯಾಂಕ್ ಸಹಯೋಗದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಟಾಟಾ ಮೋಟರ್ಸ್ ಶೋ ರೂಮ್ ಗೆ ಭೇಟಿ ನೀಡಬಹುದು ಅಥವಾ ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.