ದೀಪಾವಳಿಯಲ್ಲಿ ಕಾರು ಪಡೆಯಲು ಒಳ್ಳೆ ಅವಕಾಶವಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಕಾರು ಕಂಪನಿಗಳು ಹಬ್ಬಕ್ಕೆ ಹೊಸ ಕಾರುಗಳನ್ನು ಬಿಡುಗಡೆ ಮಾಡ್ತಿವೆ. ಜೊತೆಗೆ ಕೆಲ ಡಿಸ್ಕೌಂಟ್ ನೀಡ್ತಿದೆ. ಇದ್ರ ಮಧ್ಯೆ ಬ್ಯಾಂಕ್ ಗಳು ಕೂಡ ಕಾರುಗಳಿಗೆ ವಿಶೇಷ ಸಾಲ ಸೌಲಭ್ಯವನ್ನು ನೀಡ್ತಿವೆ.
ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆದ ಸ್ಟೇಟ್ ಆಫ್ ಇಂಡಿಯಾ ಕಾರು ಸಾಲವನ್ನು ನೀಡ್ತಿದೆ. ಎಸ್‌ಬಿಐ ಈ ಯೋಜನೆಗೆ ʼಖುಷಿಯೋಂಕಾ ಸ್ವಾಗತ್ʼ ಎಂದು ಹೆಸರಿಟ್ಟಿದೆ.
ಎಸ್‌ಬಿಐನ ಹಬ್ಬದ ಪ್ರಸ್ತಾಪದ ಪ್ರಕಾರ, ಎಸ್‌ಬಿಐನ ಯೋನೊ ಅಪ್ಲಿಕೇಷನ್ ಮೂಲಕ ಕಾರು ಸಾಲವನ್ನು ತೆಗೆದುಕೊಂಡರೆ, ಶೇಕಡಾ 7.5ರ ದರದಲ್ಲಿ ಕಾರು ಸಾಲ ಸಿಗಲಿದೆ. ಪ್ರಸ್ತುತ ಎಲ್ಲಾ ಬ್ಯಾಂಕುಗಳಲ್ಲಿ ಕಾರಿನ ಸಾಲ ಶೇಕಡಾ 9.25 ರಷ್ಟಿದೆ. ಎಸ್‌ಬಿಐನಿಂದ ಕಾರು ಸಾಲವನ್ನು ಪಡೆದ್ರೆ ಶೇಕಡಾ 2 ರಷ್ಟು ರಿಯಾಯಿತಿ ಸಿಗಲಿದೆ.
ಯೋನೊ ಬ್ಯಾಂಕ್ ನಲ್ಲಿ ತಕ್ಷಣ ಸಾಲ ಸಿಗಲಿದೆ. ವಿಶೇಷ ಹಬ್ಬದ ಪ್ರಸ್ತಾಪದಡಿ ಎಸ್‌ಬಿಐ 100 ಪ್ರತಿಶತದಷ್ಟು ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ಸಾಮಾನ್ಯವಾಗಿ ಎಸ್‌ಬಿಐ ಒಟ್ಟು ಕಾರು ಸಾಲದ ಶೇಕಡಾ0.51 ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ. ಇದಲ್ಲದೆ, ಎಸ್‌ಬಿಐ ಶೇಕಡಾ 100ರಷ್ಟು ಆನ್-ರೋಡ್ ಫೈನಾನ್ಸ್ ಸಹ ನೀಡುತ್ತಿದೆ. ಆದರೆ ಈ ಕೊಡುಗೆ ಆಯ್ದ ವಾಹನಗಳ ಮಾದರಿಗಳಿಗೆ ಮಾತ್ರ ಲಭ್ಯವಾಗಲಿದೆ. http://sbiyono.sbi ಗೆ ಭೇಟಿ ನೀಡಿ ಅಲ್ಲಿ ಕಾರಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.