ಹಳದಿ ಲೋಹ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಅದರಲ್ಲೂ ಮದುವೆ ಸೇರಿದಂತೆ ಶುಭ ಸಮಾರಂಭಗಳು ಆರಂಭವಾಗುವ ಹೊತ್ತಿಗೆ ದರ ಮುಗಿಲು ಮುಟ್ಟಿರುವುದು ಆಭರಣ ಪ್ರಿಯರಿಗೆ ನಿರಾಸೆ ತಂದಿದೆ.
ಕಳೆದ ಏಳು ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,110 ರೂಪಾಯಿ ಏರಿಕೆಯಾಗಿದ್ದು, ಶುಕ್ರವಾರದಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ 52,470 ರೂ. ತಲುಪಿದೆ.
ಆಭರಣ ಚಿನ್ನದ ಬೆಲೆ 10ಗ್ರಾಂಗೆ 48,100 ರೂ. ತಲುಪಿದ್ದು, ಶುಕ್ರವಾರದಂದು 24 ಕ್ಯಾರೆಟ್ ಹಾಗೂ ಆಭರಣ ಚಿನ್ನದಲ್ಲಿ ಕ್ರಮವಾಗಿ 550 ಹಾಗೂ 480 ರೂಪಾಯಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.