ಕೊರೊನಾ ಕಾರಣದಿಂದಾಗಿ ಘೋಷಿಸಲಾಗಿದ್ದ ಲಾಕ್ಡೌನ್ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ವ್ಯಾಪಾರ ವಹಿವಾಟುಗಳು ಸಹಜಸ್ಥಿತಿಗೆ ಬಂದಿದ್ದು, ಇದರ ಮಧ್ಯೆ ಕೆಲವರು ಆಸ್ತಿ ಖರೀದಿಸಲು ಬಯಸಿದ್ದಾರೆ. ಆದರೆ ಮಾರುಕಟ್ಟೆ ಮೌಲ್ಯ ಮುಗಿಲು ಮುಟ್ಟಿರುವುದರಿಂದ ನಿರಾಸೆಗೊಂಡಿದ್ದು, ಅಂತವರಿಗೆ ಸದಾವಕಾಶವೊಂದು ಇಲ್ಲಿದೆ.
ಕೆನರಾ ಬ್ಯಾಂಕ್ ಭಾರತದಾದ್ಯಂತ ಸುಮಾರು 2000ಕ್ಕೂ ಅಧಿಕ ಆಸ್ತಿಗಳನ್ನು ಮೆಗಾ ಇ ಹರಾಜು ಮೂಲಕ ಮಾರಾಟ ಮಾಡುತ್ತಿದ್ದು, ಖರೀದಿಸಲು ಬಯಸುವವರು ಅಧಿಕ ಮೌಲ್ಯದ ಆಸ್ತಿಗಳನ್ನು ಬಿಡ್ಡಿಂಗ್ ಮಾಡುವ ಮೂಲಕ ಕಡಿಮೆ ಬೆಲೆಗೆ ಇದನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
‘ಈರುಳ್ಳಿ’ ಬೆಲೆಯಲ್ಲಿ ದಿಢೀರ್ ಕುಸಿತ: ಬೆಳೆಗಾರರು ಕಂಗಾಲು
ಫ್ಲಾಟ್, ಅಪಾರ್ಟ್ಮೆಂಟ್, ಮನೆಗಳು, ಕಚೇರಿ ಸ್ಥಳ, ಕೈಗಾರಿಕಾ ನಿವೇಶನಗಳು, ಕಟ್ಟಡಗಳು, ವಾಣಿಜ್ಯ ಮಳಿಗೆಗಳು ಹಾಗೂ ಖಾಲಿ ನಿವೇಶನಗಳು ಇ ಹರಾಜಿನಲ್ಲಿ ಲಭ್ಯವಿದ್ದು, ಆಸಕ್ತರು ಲಭ್ಯವಿರುವ ಆಸ್ತಿಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https//canarabank.com>tender>sale notice ಗೆ ಭೇಟಿ ನೀಡಬಹುದಾಗಿದೆ. ಅಂದಹಾಗೆ ಇ ಮೆಗಾ ಹರಾಜು ಮಾರ್ಚ್ 16 ಹಾಗೂ ಮಾರ್ಚ್ 26 ರಂದು ನಡೆಯಲಿದೆ.