ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಮುಂತಾದ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಹಬ್ಬದ ಉಡುಗೊರೆ ನೀಡಿವೆ. ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕಾರು ಸಾಲಗಳ ಮೇಲೆ ಕೊಡುಗೆ ನೀಡಿದೆ. ನೀವೂ ಗೃಹ ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ ಅಕ್ಟೊಬರ್ 31ರವರೆಗೆ ಅವಕಾಶವಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ವಾರ್ಷಿಕ ಶೇಕಡಾ 6.9 ದರದಲ್ಲಿ ವಿಶೇಷ ಬಡ್ಡಿ ದರಗಳನ್ನು ನೀಡಿದೆ. ಸಂಸ್ಕರಣಾ ಶುಲ್ಕವಾಗಿ ಬ್ಯಾಂಕ್ 3,000 ರೂಪಾಯಿ ವಸೂಲಿ ಮಾಡ್ತಿದೆ. ಬ್ಯಾಂಕ್ ವಾರ್ಷಿಕ ಶೇಕಡಾ 7 ರಿಂದ ಶೇಕಡಾ 8.60 ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ ಗೃಹ ಸಾಲಗಳು ಮತ್ತು ಟಾಪ್-ಅಪ್ ಗೃಹ ಸಾಲಗಳ ಸಂಸ್ಕರಣಾ ಶುಲ್ಕದಲ್ಲಿ ಶೇಕಡಾ 100ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ 2020 ರ ಡಿಸೆಂಬರ್ 31 ರವರೆಗೆ ಸಂಸ್ಕರಣಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೋನೊ ಆಪ್ ಮೂಲಕ ಅರ್ಜಿ ಸಲ್ಲಿಸುವವರಿಗೆ ಎನ್ಐಎಲ್ ಸಂಸ್ಕರಣಾ ಶುಲ್ಕವನ್ನು ನೀಡುತ್ತಿದೆ. ಕ್ರೆಡಿಟ್ ಸ್ಕೋರ್ ಆಧರಿಸಿ 10 ಬಿಪಿಎಸ್ ವರೆಗೆ ಬಡ್ಡಿ ದರ ರಿಯಾಯಿತಿ ಮತ್ತು ಯೋನೊ ಆಪ್ ಮೂಲಕ ಅಪ್ಲಿಕೇಶನ್‌ನಲ್ಲಿ 5 ಬಿಪಿಎಸ್ ಬಡ್ಡಿ ದರ ರಿಯಾಯಿತಿ ನೀಡ್ತಿದೆ.
ಮತ್ತೊಂದೆಡೆ, ಐಸಿಐಸಿಐ ಬ್ಯಾಂಕ್ ಗೃಹ ಸಾಲ ಮತ್ತು ಗೃಹ ಸಾಲ ವರ್ಗಾವಣೆಗೆ ಶೇಕಡಾ 6.90 ರಿಂದ ಶೇಕಡಾ 8.05 ರವರೆಗೆ ಬಡ್ಡಿ ದರಗಳನ್ನು ನೀಡುತ್ತಿದೆ. ಗೃಹ ಸಾಲ ಬಾಕಿ ವರ್ಗಾವಣೆಗೆ ಸಂಸ್ಕರಣಾ ಶುಲ್ಕ 3,000 ರೂಪಾಯಿ ವಸೂಲಿ ಮಾಡ್ತಿದೆ.