ಬದಲಾದ ಜೀವನ ಶೈಲಿ, ಏಕತಾನತೆಯ ಬದುಕು, ಯಾಂತ್ರಿಕ ಜೀವನ, ಕೆಲಸದ ಒತ್ತಡ ಇವೇ ಮೊದಲಾದ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತವೆ.
ಅಷ್ಟಕ್ಕೂ ಒತ್ತಡ ಇದ್ದರೆ, ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿ ಬೇಗನೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ಒತ್ತಡದಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಒತ್ತಡವಿದ್ದರೆ, ಸೃಜನಶೀಲತೆ ಮರೆಯಾಗುತ್ತದೆ ಎನ್ನುತ್ತಾರೆ ಮತ್ತೆ ಕೆಲವರು.
ಜೀವನದ ಭಾಗವೇ ಆಗಿರುವ ಒತ್ತಡವನ್ನು ಕಡಿಮೆ ಮಾಡಿಕೊಂಡು ಮುನ್ನಡೆದಲ್ಲಿ ಯಶಸ್ಸು ಕಾಣಬಹುದಾಗಿದೆ. ಬೆಳಿಗ್ಗೆಯಿಂದ ಹಿಡಿದು ರಾತ್ರಿಯವರೆಗೆ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಹೀಗಿರುವಾಗ ಒತ್ತಡ ಕಡಿಮೆಯಾಗಲು ಹೇಗೆ ಸಾಧ್ಯ.
ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಇದಕ್ಕಾಗಿ ಯಾವುದೇ ಸಿದ್ಧ ಸೂತ್ರಗಳಿಲ್ಲ. ಒತ್ತಡವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ಒತ್ತಡ ಇಲ್ಲದಿದ್ದಾಗ ಉತ್ಸಾಹ ಹೆಚ್ಚುತ್ತದೆ. ಅದರಿಂದ ಹೊಸ ಯೋಚನೆ, ಆಲೋಚನೆಗಳು ಬರುತ್ತವೆ. ನಿಮ್ಮ ಕೆಲಸಗಳನ್ನು ಪರಿಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎನ್ನುವುದು ತಿಳಿದವರ ಅಭಿಪ್ರಾಯವಾಗಿದೆ.