ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಕಳೆದ ಹಲವಾರು ತಿಂಗಳಿಂದ ಇಷ್ಟು ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿರಲಿಲ್ಲ. ಎಂಸಿಎಕ್ಸ್ ನಲ್ಲಿ ಚಿನ್ನದ ದರ ಶುಕ್ರವಾರ 238 ರೂಪಾಯಿ ಇಳಿದು 10 ಗ್ರಾಂಗೆ 49,666 ರೂಪಾಯಿಯಾಗಿತ್ತು. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡಿದೆ. ಬೆಳ್ಳಿ ಸುಮಾರು ಶೇಕಡಾ 1 ರಷ್ಟು ಇಳಿದು ಕೆ.ಜಿ.ಗೆ 59,018 ರೂಪಾಯಿಯಾಗಿದೆ.
ಈ ವಾರ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 2,000 ರೂಪಾಯಿ ಇಳಿದಿದೆ. ಬೆಳ್ಳಿ ಪ್ರತಿ ಕೆ.ಜಿ.ಗೆ 9,000 ರೂಪಾಯಿಗಿಂತ ಹೆಚ್ಚು ಅಗ್ಗವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 48,800 ರೂಪಾಯಿಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ, ಮಾರ್ಚ್ ನಂತ್ರ ಚಿನ್ನ ಮತ್ತು ಬೆಳ್ಳಿಯಲ್ಲಿ ಇದು ಅತಿದೊಡ್ಡ ಕುಸಿತವಾಗಿದೆ. ಕಳೆದ ಒಂದು ವಾರದಲ್ಲಿ ಚಿನ್ನವು ಶೇಕಡಾ 4.6 ರಷ್ಟು ಕುಸಿದಿದ್ದರೆ, ಬೆಳ್ಳಿ ಸಹ 15 ಪ್ರತಿಶತದಷ್ಟು ಅಗ್ಗವಾಗಿದೆ. ಡಾಲರ್ ಮೌಲ್ಯ ಹೆಚ್ಚಾಗಿರುವುದು ಮತ್ತು ಜಾಗತಿಕ ಆರ್ಥಿಕತೆಯ ಬಗೆಗಿನ ಅನಿಶ್ಚಿತತೆಯಿಂದಾಗಿ ಬಂಗಾರ, ಬೆಳ್ಳಿ ಬೆಲೆ ಕುಸಿಯುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.