ಸೈಬರ್ ಅಪರಾಧಿಗಳು ಜನರ ಹಣ ದೋಚಲು ಹೊಸ ಪ್ಲಾನ್ ಮಾಡಿದ್ದಾರೆ. ಮೊದಲು ನಂಬರ್ ಗೆ ಸಂದೇಶ ಕಳುಹಿಸುವ ಖದೀಮರು ನಂತ್ರ ಖಾತೆಯಲ್ಲಿರುವ ಹಣ ದೋಚುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದೆ. ನಿಮ್ಮ ಖಾತೆಗೆ ಹಣ ಹಾಕಬೇಕು. ಮಾಹಿತಿ ನೀಡಿ ಎಂದು ಜನರಿಂದ ಮಾಹಿತಿ ಪಡೆಯುವ ಖದೀಮರು ನಂತ್ರ ಮೋಸ ಮಾಡ್ತಾರೆ.
ಹಣದ ಆಸೆಗೆ ಲಿಂಕ್ ಮೇಲೆ ಕ್ಲಿಕ್ ಮಾಡ್ತಿದ್ದಂತೆ ಜನರ ಖಾತೆ ಮಾಹಿತಿ ಸೈಬರ್ ಅಪರಾಧಿಗಳ ಕೈ ಸೇರುತ್ತದೆ. ಅನೇಕ ಜನರು ಇದ್ರಿಂದ ಹಣ ಕಳೆದುಕೊಂಡಿದ್ದಾರೆ. ನಿಮ್ಮ ಖಾತೆಗೆ ಒಂದು ರೂಪಾಯಿ ಹಾಕಲಾಗಿದೆ. ನಿಮ್ಮ ಖಾತೆ ಇದೇ ಎಂದು ದೃಢಪಡಿಸಿದ್ರೆ ದೊಡ್ಡ ಮೊತ್ತದ ಹಣ ಹಾಕುತ್ತೇವೆಂದು ಹೇಳ್ತಾರೆ. ಇದನ್ನು ನಂಬುವ ಜನರು ಲಿಂಕ್ ಚೆಕ್ ಮಾಡ್ತಾರೆ.
ಒಬ್ಬರು 17 ಸಾವಿರ ರೂಪಾಯಿ ಕಳೆದುಕೊಂಡ್ರೆ ಮತ್ತೆ ಕೆಲವರು 39000 ರೂಪಾಯಿ ಕಳೆದುಕೊಂಡಿದ್ದಾರೆ. ಇನ್ನೊಬ್ಬರು 40 ಸಾವಿರ ಕಳೆದುಕೊಂಡಿದ್ದಾರೆ. ಸೈಬರ್ ಅಪರಾಧದ ಬಗ್ಗೆ ಬ್ಯಾಂಕ್ ಗಳು ಕೂಡ ಜನರಿಗೆ ಎಚ್ಚರಿಕೆ ನೀಡ್ತಿವೆ.