alex Certify ಏರ್ಟೆಲ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ ಈ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ಟೆಲ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ ಈ ಸೌಲಭ್ಯ

ಏರ್ಟೆಲ್ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಏರ್ಟೆಲ್, ಗ್ರಾಹಕರಿಗೆ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ನೀಡ್ತಿದೆ. ಹಬ್ಬದ ಸಂದರ್ಭದಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಈ ವಿಶೇಷ ಕೊಡುಗೆ ನೀಡ್ತಿದೆ. 3 ತಿಂಗಳವರೆಗೆ ಉಚಿತ ಯೂಟ್ಯೂಬ್ ಪ್ರೀಮಿಯಂ ಪಡೆಯಬಹುದು.

ಏರ್ಟೆಲ್ ಗ್ರಾಹಕರು ಈ ಚಂದಾದಾರಿಕೆಯನ್ನು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಿಂದ ಪಡೆಯಬಹುದು. ಇದು ಪ್ರಸ್ತುತ ಆಯ್ದ ಗ್ರಾಹಕರಿಗೆ ಲಭ್ಯವಿದೆ. ಕಂಪನಿಯು ಇತ್ತೀಚೆಗೆ ಪ್ರೀಮಿಯಂ ಗ್ರಾಹಕರನ್ನು ಆಕರ್ಷಿಸಲು ಉಚಿತ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವವನ್ನು ನೀಡಲು ಶುರು ಮಾಡಿದೆ.

ಯೂಟ್ಯೂಬ್ ಪ್ರೀಮಿಯಂನಲ್ಲಿ ಜಾಹೀರಾತು ರಹಿತ ವೀಡಿಯೊಗಳನ್ನು ವೀಕ್ಷಿಸಬಹುದು. ಗ್ರಾಹಕರಿಗೆ ಹಿನ್ನೆಲೆ ಪ್ಲೇಬ್ಯಾಕ್ ಆಯ್ಕೆಯೂ ಸಿಗುತ್ತದೆ. ಯೂಟ್ಯೂಬ್ ಸಂಗೀತ ಮತ್ತು ಯೂಟ್ಯೂಬ್ ಒರಿಜನಲ್  ಸಹ ಹೊಂದಿರುತ್ತದೆ. ಯೂಟ್ಯೂಬ್ ಪ್ರೀಮಿಯಂ ಬಳಸದ ಗ್ರಾಹಕರಿಗೆ ಏರ್ಟೆಲ್ ಈ ಪ್ರೀಮಿಯಂ ಸೌಲಭ್ಯ ನೀಡುತ್ತಿದೆ. ಈಗಾಗಲೇ ಚಂದಾದಾರರಾಗಿರುವ ಬಳಕೆದಾರರಿಗೆ ಇದು ಸಿಗುವುದಿಲ್ಲ. ಹೊಸ ಗ್ರಾಹಕರು ಇದರ ಲಾಭ ಪಡೆಯಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...