ಒಂದು ಕಡೆ ಕೊರೊನಾದಿಂದ ತತ್ತರಿಸಿದ್ದಾರೆ ಜನ. ಇದರ ಮಧ್ಯೆ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಅನೇಕ ಉದ್ಯಮಗಳು ಪುನರಾರಂಭಗೊಂಡರೂ ಚೇತರಿಕೆ ಹಂತ ಕಾಣುತ್ತಿಲ್ಲ. ಇದರ ಮಧ್ಯೆ ಚಿನ್ನದ ದರ ಕೂಡ ಹೆಚ್ಚಾಗುತ್ತಲೇ ಇದೆ.
ಕೊರೊನಾ ಪಿಡುಗು ಪ್ರಾರಂಭವಾದಾಗಿನಿಂದಲೂ ಚಿನ್ನ-ಬೆಳ್ಳಿಯ ದರದಲ್ಲಿ ಏರಿಕೆ ಕಾಣುತ್ತಲೇ ಇದೆ. ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಪ್ರತಿ ನಿತ್ಯವೂ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಹತ್ತು ಗ್ರಾಂ ಚಿನ್ನಕ್ಕೆ 50 ಸಾವಿರ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನೂ ಏರಿಕೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ತಜ್ಞರು.
ಆಭರಣ ಚಿನ್ನ 10 ಗ್ರಾಂಗೆ 420 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 52,800 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 520 ರೂಪಾಯಿ ಏರಿಕೆ ಕಂಡಿದ್ದು, 57,600 ರೂಪಾಯಿ ಆಗಿದೆ. ಬೆಳ್ಳಿಯ ದರವಂತೂ ಒಂದೇ ದಿನಕ್ಕೆ 3010 ರೂಪಾಯಿ ಏರಿಕೆ ಕಂಡಿದೆ. ಚಿನ್ನದ ಮೇಲೆ ಹೆಚ್ಚಿನ ಹೂಡಿಕೆಯಾಗುತ್ತಿರೋದ್ರಿಂದ ಬೆಲೆಯಲ್ಲಿ ಜಿಗಿತ ಕಾಣುತ್ತಿದೆ.