ಈ ಹಿಂದೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಹೊರ ರಾಜ್ಯಗಳಿಗೆ ಶುಂಠಿ ಸಾಗಿಸಲಾಗದೆ ಬೆಲೆ ಪಾತಾಳಕ್ಕೆ ಕುಸಿದಿದ್ದು, ಇದರಿಂದಾಗಿ ಬೆಳೆಗಾರರು ಕಂಗೆಟ್ಟು ಹೋಗಿದ್ದರು. ಹೀಗಾಗಿ ಬಹಳಷ್ಟು ಬೆಳೆಗಾರರು ಶುಂಠಿಯನ್ನು ಸ್ಥಳೀಯವಾಗಿಯೇ ಅತ್ಯಂತ ಕಡಿಮೆ ದರಕ್ಕೆ ಮಾರಾಟ ಮಾಡಿದ್ದರು.
ಇದೀಗ ಲಾಕ್ಡೌನ್ ಸಡಿಲಿಕೆ ಆಗಿರುವ ಕಾರಣ ಹೊರರಾಜ್ಯಗಳಿಗೆ ಶುಂಠಿ ಸಾಗಾಣಿಕೆಯಾಗುತ್ತಿದ್ದು ಜೊತೆಗೆ ಬೆಲೆಯೂ ಭಾರೀ ಏರಿಕೆಯಾಗಿದೆ. ಪ್ರತಿ ಕ್ವಿಂಟಾಲ್ ಗೆ 6 ರಿಂದ 7 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದು, ಒಣಶುಂಠಿ 23 ಸಾವಿರ ರೂಪಾಯಿ ಗಡಿದಾಟಿದೆ.
ಶಿವಮೊಗ್ಗದಲ್ಲಿ ಶುಂಠಿ ಬೆಲೆ ಎರಡು ದಿನಗಳ ಹಿಂದೆ 7 ರಿಂದ 8 ಸಾವಿರ ರೂಪಾಯಿ ಆಸುಪಾಸು ತಲುಪಿದ್ದು, ಶನಿವಾರದಂದು 6,500 ರಿಂದ 7 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಇನ್ನು ಭಾನುವಾರದ ಅಂತ್ಯಕ್ಕೆ 5,500 ರಿಂದ 6,500 ರೂ. ಗಳಿಗೆ ಇಳಿಕೆ ಕಂಡಿದೆ. ಇನ್ನು ಕೆಲ ದಿನಗಳ ಕಾಲ ಶುಂಠಿ ಬೆಳೆಯಲ್ಲಿ ಏರಿಳಿತ ಕಾಣಲಿದೆ ಎನ್ನಲಾಗಿದೆ.