ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. 2019-20ನೇ ಸಾಲಿನ ಈ ಉದ್ಯೋಗಿಗಳಿಗೆ ಪರ್ಫಾರ್ಮೆನ್ಸ್ ಲಿಂಕ್ಡ್ ರಿವಾರ್ಡ್ ಆಗಿ ಕಂಪನಿಯು ಪ್ರತಿ ಉದ್ಯೋಗಿಗೆ 68500 ರೂಪಾಯಿ ನೀಡಲಿದೆ. ಈ ಮೊತ್ತವನ್ನು ದೀಪಾವಳಿಯ ಉಡುಗೊರೆಯಾಗಿ ಅಕ್ಟೋಬರ್ 25 ರ ಮೊದಲು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಸುಮಾರು 2.62 ಲಕ್ಷ ಉದ್ಯೋಗಿಗಳಿಗ ಇದ್ರ ಲಾಭ ಸಿಗಲಿದೆ. ಕಂಪನಿಗೆ ಇದ್ರಿಂದ 1700 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕೋಲ್ ಇಂಡಿಯಾದ 8 ಅಂಗ ಸಂಸ್ಥೆಗಳ ಉದ್ಯೋಗಿಗಳಿಗೂ ಇದ್ರ ಪ್ರಯೋಜನ ಸಿಗಲಿದೆ. ಕಳೆದ ವರ್ಷ ಕಂಪನಿಯು ತನ್ನ ಉದ್ಯೋಗಿಗಳಿಗೆ ಪಿಎಲ್ಆರ್ ಆಗಿ 64,700 ರೂಪಾಯಿಗಳನ್ನು ನೀಡಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದರೂ ಈ ಬಾರಿ ಪಿಎಲ್‌ಆರ್ ಶೇಕಡಾ 5.87 ರಷ್ಟು ವೃದ್ಧಿ ಕಂಡಿದೆ. ಕೊರೊನಾ ವೈರಸ್ ಈ ವರ್ಷ ಕಲ್ಲಿದ್ದಲು ಮಾರಾಟದ ಮೇಲೆ ಪರಿಣಾಮ ಬೀರುತ್ತಿದ್ದರೂ, ಉದ್ಯೋಗಿಗಳಿಗೆ ಹೆಚ್ಚಿನ ಬೋನಸ್ ನೀಡಲಾಗುತ್ತಿದೆ.