ಸ್ವೀಡಿಷ್ ಚಿಲ್ಲರೆ ವ್ಯಾಪಾರಿ ಇಕಿಯಾ ಮತ್ತು ಎಚ್ ಅಂಡ್ ಎಂ ಬೆಂಗಳೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಿವೆ. ಎರಡೂ ಕಂಪನಿಗಳು ಆರಂಭದಲ್ಲಿ ಒಟ್ಟು 2,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಖುಷಿ ಸುದ್ದಿ ನೀಡಿದೆ.
ಟಾರ್ಗೆಟ್, ಸಾಕ್ಸ್ ಫಿಫ್ತ್ ಅವೆನ್ಯೂ, ಜೆಸಿಪೆನ್ ಮತ್ತು ಲೊವೆ ಸೇರಿದಂತೆ ಯುಎಸ್ ಚಿಲ್ಲರೆ ವ್ಯಾಪಾರಿಗಳು ಈಗಾಗಲೇ ನಗರದಲ್ಲಿ ತಂತ್ರಜ್ಞಾನ ಕೇಂದ್ರಗಳನ್ನು ಹೊಂದಿವೆ. ಯುಕೆ ಮೂಲದ ಟೆಸ್ಕೊ ಅನೇಕ ವರ್ಷಗಳಿಂದ ತಂತ್ರಜ್ಞಾನ ಕೇಂದ್ರವನ್ನು ಹೊಂದಿದೆ.
ಕಾರ್ಲೆ ಟೌನ್ ಸೆಂಟರ್ ಎಸ್ ಇಝೆಡ್ ನಲ್ಲಿ ಎರಡೂ ಕಂಪನಿಗಳು ಅಕ್ಕಪಕ್ಕದಲ್ಲಿ ಕೇಂದ್ರ ಸ್ಥಾಪಿಸುತ್ತಿವೆ. ಬೆಂಗಳೂರಿನಲ್ಲಿರುವ ಇಕಿಯಾ ಕೇಂದ್ರವು ಪೋಲೆಂಡ್, ಚೀನಾ ಮತ್ತು ಯುಎಸ್ನಲ್ಲಿನ ಇತರ ಮೂರು ಜಾಗತಿಕ ವ್ಯಾಪಾರ ಕಾರ್ಯಾಚರಣೆಗಳಿಗಿಂತ ದೊಡ್ಡದಾಗಲಿದೆ.
ಪೋಲೆಂಡ್, ಚೀನಾ ಮತ್ತು ಯುಎಸ್ನಲ್ಲಿ ಐಕಿಯಾ ಕೇಂದ್ರಗಳು ಒಟ್ಟಾಗಿ 1000 ನೌಕರರನ್ನು ಹೊಂದಿದೆ. 30 ದೇಶಗಳಲ್ಲಿ 374 ಕೇಂದ್ರಗಳನ್ನು ಹೊಂದಿರುವ ಐಕಿಯಾ, ಭಾರತದಲ್ಲಿ ಮೊದಲ ಬಾರಿ ಹೈದ್ರಾಬಾದ್ ನಲ್ಲಿ ಸ್ಟೋರ್ ತೆಗೆದಿದೆ. ಆನ್ಲೈನ್ ಸ್ಟೋರ್ ಮುಂಬೈನಲ್ಲಿದೆ.