ನಿರುದ್ಯೋಗಿಗಳಿಗೆ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ (ಒಎನ್‌ಜಿಸಿ) ಖುಷಿ ಸುದ್ದಿ ನೀಡಿದೆ. ಒ.ಎನ್.ಜಿ.ಸಿ.ಯಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಸಿಗ್ತಿದೆ. ಒ.ಎನ್.ಜಿ.ಸಿ. 4000 ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ಮುಂದಾಗಿದೆ. ಪದವೀಧರ ಮತ್ತು ಡಿಪ್ಲೊಮಾ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ongcapprentices.ongc.co.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅಪ್ಲಿಕೇಷನ್ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. 1961ರ ಕಾಯ್ದೆ ಆಧಾರದ ಮೇಲೆ ಸ್ಟೈಫಂಡ್ ಸಿಗಲಿದೆ.
ಉತ್ತರ ಪ್ರದೇಶ (ಉತ್ತರ ವಲಯ- ಡೆಹ್ರಾಡೂನ್, ದೆಹಲಿ, ಜೋಧ್‌ಪುರ) 228 ಹುದ್ದೆ
ಮುಂಬೈ ಸೆಕ್ಟರ್ (ಮುಂಬೈ ಸೆಕ್ಟರ್- ಮುಂಬೈ, ಗೋವಾ, ಹಜೀರಾ, ಯುರಾನ್) 764 ಹುದ್ದೆಗಳು
ಪಶ್ಚಿಮ ವಲಯ (ಪಶ್ಚಿಮ ವಲಯ- ಕಾಂಬೆ, ವಡೋದರಾ, ಅಂಕಲೇಶ್ವರ, ಅಹಮದಾಬಾದ್, ಮೆಹ್ಸಾನಾ) 1579 ಹುದ್ದೆ
ಪೂರ್ವ ಪ್ರದೇಶ (ಈಸ್ಟರ್ನ್ ಸೆಕ್ಟರ್- ಜೋರ್ಹತ್, ಸಿಲ್ಚಾರ್, ನಜೀರಾ ಮತ್ತು ಶಿವಸಾಗರ್) 716 ಹುದ್ದೆ
ದಕ್ಷಿಣ ವಲಯ (ದಕ್ಷಿಣ ವಲಯ- ಚೆನ್ನೈ, ಕಾಕಿನಾಡ, ರಾಜಮಂಡ್ರಿ, ಕಾರೈಕಲ್) 674 ಹುದ್ದೆಗಳು
ಕೇಂದ್ರ ವಲಯ (ಸೆಂಟ್ರಲ್ ಸೆಕ್ಟರ್- ಅಗರ್ತಲಾ, ಕೋಲ್ಕತಾ) 221 ಹುದ್ದೆಗಳ ಭರ್ತಿ ನಡೆಯಲಿದೆ.
ಅಕೌಂಟೆಂಟ್ ಹುದ್ದೆಗೆ ವಾಣಿಜ್ಯ ಪದವಿ ಪಡೆದಿರಬೇಕು. ಸಹಾಯಕ ಎಚ್‌ಆರ್‌ಗಾಗಿ ಬಿ.ಎ. ಮತ್ತು ಬಿ.ಬಿ.ಎ. ಪದವಿ ಪಡೆದಿರಬೇಕು. ಸೆಕ್ರೆಟರಿಯಲ್ ಅಸಿಸ್ಟೆಂಟ್‌ಗಾಗಿ, ಸೆಕ್ರೆಟರಿಯಲ್ ಅಸಿಸ್ಟೆಂಟ್ ಟ್ರೇಡ್‌ನಲ್ಲಿ ಐಟಿಐ ಅವಶ್ಯಕ.
ಪ್ರಯೋಗಾಲಯದ ಸಹಾಯಕರ ಹುದ್ದೆಗೆ ಪಿಸಿಎಂ ಮತ್ತು ಪಿಸಿಬಿಯಿಂದ ಬಿ.ಎಸ್ಸಿ. ಪದವಿಯೊಂದಿಗೆ ಲ್ಯಾಬ್ ಅಸಿಸ್ಟೆಂಟ್ ಗೆ ಐಟಿಐ ಮುಗಿಸಿರಬೇಕು. ಗರಿಷ್ಠ 24 ವರ್ಷ ವಯಸ್ಸಿನವರು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಹತಾ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.