ಭಾರತೀಯ ಐಟಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ನೇಮಕಾತಿಗೆ ತಯಾರಿ ನಡೆಸುತ್ತಿವೆ. ಉನ್ನತ ಕಂಪನಿಗಳು ದೇಶದಲ್ಲಿ ಕನಿಷ್ಠ ಒಂದು ಲಕ್ಷ ಜನರನ್ನು ನೇಮಿಸಿಕೊಳ್ಳುವ ತಯಾರಿಯಲ್ಲಿವೆ.
ಕ್ಲೈಂಟ್ ಕಂಪನಿಗಳಿಂದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಕೆಲಸವನ್ನು ವರ್ಗಾಯಿಸಿರುವುದ್ರಿಂದ ಐಟಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಗ್ರಾಹಕ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಹೊರ ಗುತ್ತಿಗೆಗೆ ಒತ್ತು ನೀಡುತ್ತಿವೆ. ಈ ಕಾರಣದಿಂದಾಗಿ, ಐಟಿ ಕಂಪನಿಗಳು ನೇಮಕಾತಿಗೆ ಮುಂದಾಗಿವೆ.
ಮೊದಲ ತ್ರೈಮಾಸಿಕದಲ್ಲಿ ನೇಮಕಾತಿಯನ್ನು ನಿಲ್ಲಿಸಿದ್ದ ಐಟಿ ಕಂಪನಿಗಳು ಈಗ ವೇಗವಾಗಿ ನೇಮಕಾತಿ ಶುರು ಮಾಡಿವೆ. ದೇಶದ ಅತಿದೊಡ್ಡ ಐಟಿ ಕಂಪನಿ ಟಿಸಿಎಸ್ ಈ ವರ್ಷ 40 ಸಾವಿರ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ಇನ್ಫೋಸಿಸ್ 20 ಸಾವಿರ ಮತ್ತು ಎಚ್‌ಸಿಎಲ್ 15 ಸಾವಿರ ನೇಮಕ ಮಾಡಿಕೊಳ್ಳಲಿದೆ.
ಕೆಲ ಮಧ್ಯಮ ಗಾತ್ರದ ಐಟಿ ಕಂಪನಿಗಳು ನೇಮಕಾತಿಯನ್ನು ಆರಂಭದಲ್ಲಿ ನಿಲ್ಲಿಸಿದ್ದವು. ಈಗ ಮತ್ತೆ ನೇಮಕಾತಿ ಶುರುವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಐಟಿ ಕಂಪನಿಗಳ ಆದಾಯ ಕಡಿಮೆಯಾಗಿದೆ. ಆದರೆ ಈಗ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ಕಂಪನಿಗಳ ಬಹಳಷ್ಟು ಕೆಲಸಗಳನ್ನು ಡಿಜಿಟಲ್ ಮೋಡ್‌ನಲ್ಲಿ ಮಾಡಲಾಗುತ್ತಿದೆ.