ಕೊರೊನಾ ಕಾರಣಕ್ಕೆ ಘೋಷಿಸಲಾದ ಲಾಕ್ಡೌನ್, ಹಲವಾರು ಉದ್ಯಮಗಳು ಆರ್ಥಿಕವಾಗಿ ತೀರಾ ಕಂಗೆಡುವಂತೆ ಮಾಡಿತ್ತು. ಇದರಿಂದಾಗಿ ಬಹಳಷ್ಟು ಉದ್ಯಮಗಳು ಮುಚ್ಚಲ್ಪಟ್ಟಿದ್ದ ಕಾರಣ ಬಹುತೇಕರು ಉದ್ಯೋಗ ಕಳೆದುಕೊಂಡಿದ್ದರು.
ಇದೀಗ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ನವೋದ್ಯಮ ಉತ್ತೇಜಿಸಲು ಹಾಗೂ ಉದಯೋನ್ಮುಖ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಒಂದು ಸಾವಿರ ಕೋಟಿ ರೂಪಾಯಿಗಳ ‘ಸ್ಟಾರ್ಟ್ ಅಪ್ ಇಂಡಿಯಾ ಸಿಂಡ್ ಅಂಡ್’ಎಂಬ ಯೋಜನೆಯನ್ನು ಆರಂಭಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಇದಕ್ಕೆ ಚಾಲನೆ ನೀಡಿದ್ದು, ಅಲ್ಲದೆ ನವೋದ್ಯಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಿರುವ ‘ಸ್ಟಾರ್ಟಪ್ ಚಾಂಪಿಯನ್ಸ್’ ಎಂಬ ವಿಶೇಷ ಟಿವಿ ಕಾರ್ಯಕ್ರಮಕ್ಕೂ ಚಾಲನೆ ಕೊಟ್ಟಿದ್ದಾರೆ.