ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ, ಅತ್ಯಂತ ಜನಪ್ರಿಯ ವಿಮಾ ಪಾಲಿಸಿ ಜೀವನ್ ಅಕ್ಷಯ್ ಪಾಲಿಸಿಯನ್ನು ಬಂದ್ ಮಾಡಿತ್ತು. ಈಗ ಮತ್ತೆ ಪಾಲಿಸಿ ಆರಂಭಿಸುತ್ತಿದೆ. ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿಯಡಿಯಲ್ಲಿ ಪಾಲಿಸಿದಾರ ಒಮ್ಮೆ ಮಾತ್ರ ಕಂತು ನೀಡಿದ್ರೆ ಸಾಕು. ಜೀವಿತಾವಧಿಯವರೆಗೆ ಪಿಂಚಣಿಯನ್ನು ಪಡೆಯಬಹುದು.
ಜೀವನ್ ಅಕ್ಷಯ್ ಪಾಲಿಸಿಯನ್ನು ಕನಿಷ್ಠ 1,00,000 ರೂಪಾಯಿಗಳ ಹೂಡಿಕೆ ಮಾಡುವ ಮೂಲಕ ಪ್ರಾರಂಭಿಸಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಪಾಲಿಸಿಯಲ್ಲಿ ಒಬ್ಬ ವ್ಯಕ್ತಿಯು ಕನಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 12,000 ರೂಪಾಯಿ ಪಿಂಚಣಿ ಸಿಗುತ್ತದೆ. ಅಂದರೆ ಒಂದು ಬಾರಿ 1 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ಪ್ರತಿ ವರ್ಷ 12,000 ರೂಪಾಯಿ ಪಿಂಚಣಿ ಸಿಗುತ್ತದೆ.
35 ವರ್ಷದಿಂದ 85 ವರ್ಷದ ಯಾವುದೇ ವ್ಯಕ್ತಿ ಈ ಪಾಲಿಸಿ ತೆಗೆದುಕೊಳ್ಳಬಹುದು. ಅಂಗವಿಕಲರು ಸಹ ಈ ಪಾಲಿಸಿ ಲಾಭ ಪಡೆಯಬಹುದು. ಉದಾಹರಣೆಗೆ, 45 ವರ್ಷದ ವ್ಯಕ್ತಿ ಈ ಯೋಜನೆಯನ್ನು ಆರಿಸಿದರೆ ಮತ್ತು 70,00,000 ರೂಪಾಯಿಗಳ ಹೂಡಿಕೆ ಆಯ್ದುಕೊಂಡ್ರೆ ಆತ ಒಟ್ಟು 71,26,000 ರೂಪಾಯಿ ಪ್ರಿಮಿಯಂ ಪಾವತಿಸಬೇಕಾಗುತ್ತದೆ. ಈ ಹೂಡಿಕೆಯ ನಂತರ ಆತನಿಗೆ ತಿಂಗಳಿಗೆ 36,429 ರೂಪಾಯಿ ಪಿಂಚಣಿ ಸಿಗುತ್ತದೆ. ವ್ಯಕ್ತಿ ಸಾವನ್ನಪ್ಪಿದ್ರೆ ಈ ಪಿಂಚಣಿ ನೀಡಲಾಗುವುದಿಲ್ಲ.