ಎಲ್ ಐ ಸಿ ಹೊಸ ‘ಜೀವನ್ ಶಾಂತಿ’ ಯೋಜನೆಯನ್ನು ಶುರು ಮಾಡಿದೆ. ಈ ಯೋಜನೆ ವಿಶೇಷವೆಂದ್ರೆ ಪಿಂಚಣಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಒಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಮಾಸಿಕ ಪಿಂಚಣಿ ಪಡೆಯಬಹುದು. ವ್ಯಕ್ತಿ ತನ್ನ ನಿವೃತ್ತಿಯ ನಂತರ ಆರಾಮದಾಯ ಜೀವನ ನಡೆಸಬಹುದು.
ಇದು ಒಂದು ಪ್ರೀಮಿಯಂ ಯೋಜನೆಯಾಗಿದೆ. ಜೀವನ್ ಶಾಂತಿ ಯೋಜನೆಯಲ್ಲಿ ಗ್ರಾಹಕರು ಎರಡು ಆಯ್ಕೆಗಳನ್ನು ಆಯ್ದುಕೊಳ್ಳಬಹುದು. ಪಾಲಿಸಿ ತೆಗೆದುಕೊಂಡ ತಕ್ಷಣದಿಂದಲೇ ಪಿಂಚಣಿ ಪಡೆಯುವ ಆಯ್ಕೆ ಒಂದಾದ್ರೆ ಇನ್ನೊಂದು ನಿವೃತ್ತಿ ನಂತ್ರ ಪಿಂಚಣಿ ಪಡೆಯುವುದಾಗಿದೆ. ನಿಮಗೆ 40 ವರ್ಷ ವಯಸ್ಸಾಗಿದೆ ಎಂದಿಟ್ಟುಕೊಳ್ಳಿ. ನೀವು 10 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ. ತಕ್ಷಣ ಅಥವಾ 5, 10, 20 ವರ್ಷಗಳ ನಂತ್ರ ಪಿಂಚಣಿ ಪಡೆಯುವ ಆಯ್ಕೆ ಮಾಡಿಕೊಳ್ಳಬಹುದು.
ಇದ್ರಲ್ಲಿ ಪಿಂಚಣಿ ಪ್ರಮಾಣ ನಿಗದಿಯಾಗಿಲ್ಲ. ನಿಮ್ಮ ವಯಸ್ಸಿನ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಕನಿಷ್ಠ 30 ವರ್ಷ, ಗರಿಷ್ಠ 85 ವರ್ಷ ವಯಸ್ಸಿನ ವ್ಯಕ್ತಿಗಳು ಈ ಎಲ್‌ಐಸಿ ಯೋಜನೆಯನ್ನು ತೆಗೆದುಕೊಳ್ಳಬಹುದು. ಜೀವನ್ ಶಾಂತಿ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಒಮ್ಮೆ ಒಂದು ಆಯ್ಕೆಯನ್ನು ಆಯ್ದುಕೊಂಡ ನಂತ್ರ ಅದನ್ನು ಬದಲಿಸಲು ಸಾಧ್ಯವಿಲ್ಲ.