
ಐದನೇ ಹಂತದ ಕೊರೊನಾ ಲಾಕ್ಡೌನ್ ದೇಶದಾದ್ಯಂತ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ಮಾಡಿರುವ ಕಾರಣ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ ಬಂದ್ ಆಗಿದ್ದ ಅಂಗಡಿ-ಮುಂಗಟ್ಟು, ಹೋಟೆಲ್, ರೆಸ್ಟೋರೆಂಟ್ ಗಳು ತೆರೆದಿದ್ದು, ಬೆರಳೆಣಿಕೆಯ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವೂ ಬಹುತೇಕ ಆರಂಭವಾದಂತಾಗಿದೆ.
ಇದರ ಜೊತೆಗೆ ವಾಹನ ಮಾರಾಟವೂ ಚುರುಕು ಪಡೆದುಕೊಂಡಿದ್ದು, ಕೊರೊನಾ ಲಾಕ್ಡೌನ್ ಗಿಂತ ಮುಂಚಿತವಾಗಿಯೇ ಆರ್ಥಿಕ ಹಿಂಜರಿತದ ಕಾರಣ ತೀವ್ರ ಸಂಕಷ್ಟ ಎದುರಿಸಿದ್ದ ಆಟೋಮೊಬೈಲ್ ಉದ್ಯಮ ಈಗ ಚೇತರಿಕೆಯ ಹಾದಿಯತ್ತ ಸಾಗಿದೆ.
ಸೆಕೆಂಡ್ ಹ್ಯಾಂಡ್ ಕಾರುಗಳ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದ್ದು, ಕೊರೊನಾ ಕಾರಣಕ್ಕೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿರುವ ಸಾರ್ವಜನಿಕರು, ಕಾರು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೊಸ ಕಾರು ಖರೀದಿಸಲು ಆರ್ಥಿಕ ಸಂಕಷ್ಟ ಇರುವ ಕಾರಣ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.