ಕಳೆದ ಮೇ ತಿಂಗಳಲ್ಲಿ ಸ್ಕೂಟರ್ ಗಳ ಮಾರಾಟದಲ್ಲಿ ಹೊಂಡಾ ಮೊದಲ ಸ್ಥಾನದಲ್ಲಿದೆ. ಹೊಂಡಾದ ಹೊಂಡಾ ಆ್ಯಕ್ಟಿವಾ 1,49,407 ಯೂನಿಟ್ ಗಳು ಮಾರಾಟವಾಗಿವೆ. ನಂತರದ ಸ್ಥಾನದಲ್ಲಿ ಅಂದರೆ ಎರಡು ಮತ್ತು ಮೂರನೇ ಸ್ಥಾನದಲ್ಲಿ ಟಿವಿಎಸ್ ಜ್ಯೂಪಿಟರ್ ಮತ್ತು ಸುಜುಕಿ ಅಕ್ಸೆಸ್ ಇವೆ.
ದೇಶದೆಲ್ಲೆಡೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾತುಗಳು ಕೇಳಿ ಬರುತ್ತಿದ್ದರೂ, ಅತ್ಯಧಿಕ ಸ್ಕೂಟರ್ ಗಳ ಮಾರಾಟದಲ್ಲಿ ಇರುವ ಟಾಪ್ 10 ಕಂಪನಿಗಳ ಪೈಕಿ ಒಂದೇ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಸ್ಥಾನ ಪಡೆದಿದೆ. ಒಲಾ ಎಸ್1 ಪ್ರೊ ಈ ಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮೇ ತಿಂಗಳಲ್ಲಿ 1,49,407 ಆ್ಯಕ್ಟಿವಾ ಸ್ಕೂಟರ್ ಗಳನ್ನು ಮಾರಾಟ ಮಾಡಿರುವ ಹೊಂಡಾ ಮೊದಲ ಸ್ಥಾನದಲ್ಲಿದೆ. ಹಿಂದಿನ ತಿಂಗಳು ಅಂದರೆ ಏಪ್ರಿಲ್ ಗಿಂತ ಕಡಿಮೆ ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. ಏಪ್ರಿಲ್ ನಲ್ಲಿ 1,63,357 ಸ್ಕೂಟರ್ ಗಳನ್ನು ಮಾರಾಟ ಮಾಡಿತ್ತು.
ಇನ್ನು ಎರಡನೇ ಸ್ಥಾನದಲ್ಲಿರುವ ಟಿವಿಎಸ್ ಕಂಪನಿ 59,613 ಜ್ಯುಪಿಟರ್ ಸ್ಕೂಟರ್ ಗಳನ್ನು ಮಾರಾಟ ಮಾಡಿದ್ದರೆ, ಸುಜುಕಿ ಕಂಪನಿ ತನ್ನ 35,709 ಸುಜುಕಿ ಅಕ್ಸೆಸ್ ಸ್ಕೂಟರ್ ಗಳನ್ನು ಮಾರಾಟ ಮಾಡಿ ಮೂರನೇ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ ಈ ಕೆಳಕಂಡ ಕಂಪನಿಗಳ ಸ್ಕೂಟರ್ ಗಳು ನಿಲ್ಲುತ್ತವೆ.
ಇದೇ ಅವಧಿಯಲ್ಲಿ 26,005 ಟಿವಿಎಸ್ ಎನ್ ಟಾರ್ಕ್ ಸ್ಕೂಟರ್ ಗಳು ಮಾರಾಟವಾಗಿದ್ದು, ಏಪ್ರಿಲ್ ತಿಂಗಳಿಗಿಂತ ಸ್ವಲ್ಪ ಹೆಚ್ಚು ಸ್ಕೂಟರ್ ಗಳು ಮಾರಾಟ ಮಾಡಿದ ದಾಖಲೆಯನ್ನು ಟಿವಿಎಸ್ ಸಾಧಿಸಿದೆ.
ಹೊಂಡಾದ ಇನ್ನೊಂದು ಸ್ಕೂಟರ್ ಡಿಯೋ ಟಾಪ್ 10 ಪಟ್ಟಿಯಲ್ಲಿದ್ದು, ಮೇ ತಿಂಗಳಲ್ಲಿ 20,847 ಸ್ಕೂಟರ್ ಗಳು ಮಾರಾಟವಾಗಿವೆ. ನಂತರದ ಸ್ಥಾನದಲ್ಲಿ ಹೀರೋ ಪ್ಲೆಸರ್ ಇದ್ದು, 18,531 ಸ್ಕೂಟರ್ ಗಳು ಮಾರಾಟವಾಗಿವೆ.
ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿ ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ಸ್ಕೂಟರ್ ಇದೆ. ಮೇ ತಿಂಗಳಲ್ಲಿ 12,990 ಸ್ಕೂಟರ್ ಗಳನ್ನು ಸುಜುಕಿ ಮಾರಾಟ ಮಾಡಿದೆ.
8 ನೇ ಸ್ಥಾನದಲ್ಲಿರುವ ಹೀರೋದ ಡೆಸ್ಟಿನಿ 10,892 ಯೂನಿಟ್ ಮಾರಾಟವಾಗಿದೆ. ಇನ್ನು 9 ನೇ ಸ್ಥಾನದಲ್ಲಿರುವ ಕಂಪನಿ ಎಂದರೆ ಒಲಾ. ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಒಲಾ ಸ್ಥಾನ ಒದಗಿಸಿಕೊಟ್ಟಿದೆ. ಮೇ ತಿಂಗಳಲ್ಲಿ ಒಲಾದ 9247 S1 Pro ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರಾಟವಾಗಿವೆ.
10 ನೇ ಸ್ಥಾನದಲ್ಲಿ ಸುಜುಕಿ ಇದ್ದು, ಇದರ 8.922 ಏವಿನಿಸ್ ಸ್ಕೂಟರ್ ಗಳು ಮಾರಾಟವಾಗಿವೆ.