ಕೋವಿಡ್‌ನಿಂದ ಅನೇಕ ಮಂದಿ ಸಂಕಷ್ಟಕ್ಕೀಡಾಗಿರುವುದು ಗೊತ್ತೇ ಇದೆ. ಇದರ ಜೊತೆ ಅನೇಕ ಕಂಪನಿಗಳು ಆರ್ಥಿಕ ಮುಗ್ಗಟ್ಟಿನಿಂದ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಹೀಗಿರುವಾಗ ಅನೇಕ ಮಂದಿಗೆ ನೌಕರರ ಭವಿಷ್ಯ ನಿಧಿಯಿಂದ ಸುಲಭವಾಗಿ ಹಣ ನೀಡುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ.
ಹೌದು, ಇಷ್ಟು ದಿನ ಪಿಎಫ್ ಹಣವನ್ನು ವಿಥ್ ಡ್ರಾ ಕ್ಲೈಮ್ ಮಾಡಬೇಕು ಎಂದರೆ ಒಂದಿಷ್ಟು ದಾಖಲೆಗಳನ್ನು ನೀಡಬೇಕಿತ್ತು. ಆದರೆ ಇದೀಗ ಈ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಇಪಿಎಫ್ ಸದಸ್ಯರು ಯಾವುದೇ ರೀತಿಯ ಪ್ರಮಾಣ ಪತ್ರ ಅಥವಾ ದಾಖಲೆ ನೀಡಬೇಕಾಗುವ ಅವಶ್ಯಕತೆ ಇಲ್ಲ ಎಂದು ಟ್ವಿಟ್ ಮಾಡುವ ಮೂಲಕ ಇಪಿಎಫ್‌ಓ ತಿಳಿಸಿದೆ.
ಇನ್ನು ಹಳೆಯ ಕಚೇರಿಯಿಂದ ಹೊಸ ಕಚೇರಿಗೆ ಹೋದ ನೌಕರರು ಕೂಡ ಆನ್‌ಲೈನ್ ಮೂಲಕ ಹಣವನ್ನು ಟ್ರಾನ್ಸ್ ಫರ್ ಮಾಡಿಕೊಳ್ಳಬಹುದಾಗಿದೆ. ಹಳೆಯ ಕಂಪನಿಯಿಂದ ನಿಮಗೆ ನೀಡಿದ್ದ uan ನಂಬರ್‌ನ ಹೊಸ ಕಂಪನಿಗೆ ಹಂಚಿಕೊಳ್ಳಬಹುದು. ಅಧಿಕೃತ ವೆಬ್ ಸೈಟ್ ಗೆ ಹೋಗಿ ಕೇಳುವ ಮಾಹಿತಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ನಿಮ್ಮ ಹೊಸ ಪಿಎಫ್ ಖಾತೆಗೆ ಹಣ ಟ್ರಾನ್ಸ್ ಫರ್ ಆಗುತ್ತದೆ.