ಭಾರತೀಯ ಮಾರುಕಟ್ಟೆಯಲ್ಲಿ ಇಂದೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನ ಚಿನ್ನದ ಭವಿಷ್ಯವು ಶೇಕಡಾ 0.4 ರಷ್ಟು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 49,460 ರೂಪಾಯಿಗೆ ಇಳಿದಿದೆ. ಬೆಳ್ಳಿ ಬೆಲೆ ಕೂಡ ಇಂದು ಶೇಕಡಾ 1ರಷ್ಟು ಇಳಿಕೆ ಕಂಡಿದ್ದು, ಕೆಜಿಗೆ 58,473 ರೂಪಾಯಿಯಾಗಿದೆ.
ಕಳೆದ ವಾರ, ಚಿನ್ನದ ಬೆಲೆ 10 ಗ್ರಾಂಗೆ 2,000 ರೂಪಾಯಿಯಷ್ಟು ಇಳಿಕೆ ಕಂಡಿತ್ತು. ಬೆಳ್ಳಿ ಪ್ರತಿ ಕೆ.ಜಿ.ಗೆ 9,000 ರೂಪಾಯಿಗಳಷ್ಟು ಇಳಿಕೆ ಕಂಡಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಚಿನ್ನದ ಬೆಲೆ 1,860.19 ಡಾಲರ್ ಪ್ರತಿ ಔನ್ಸ್ ಇದೆ. ಬೆಳ್ಳಿ ಶೇಕಡಾ0.3 ರಷ್ಟು ಏರಿಕೆ ಕಂಡು 22.93 ಡಾಲರ್ ಪ್ರತಿ ಔನ್ಸ್ ಆಗಿದೆ.
ಡಾಲರ್ ಮೌಲ್ಯ ಕುಸಿತವು ಈ ಬೆಳವಣಿಗೆಗೆ ಕಾರಣವಾಗಿದೆ. ಯುರೋಪಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗಿದ್ದರಿಂದ ಮತ್ತು ಅನೇಕ ದೇಶಗಳಲ್ಲಿ ಮತ್ತೆ ಲಾಕ್ಡೌನ್‌ಗಳನ್ನು ವಿಧಿಸಲಾಗಿದ್ದರಿಂದ ಜಾಗತಿಕ ಬೆಳವಣಿಗೆ ದುರ್ಬಲಗೊಂಡಿದೆ.