ಕೊರೊನಾ ಮಹಾಮಾರಿ ಕಾರಣಕ್ಕೆ ಬಹುತೇಕ ಮಂದಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಬಳಕೆ ವ್ಯಾಪಕವಾಗಿದ್ದು, ಈ ಗ್ರಾಹಕರಿಗೆ ಸದ್ಯದಲ್ಲೇ ಭರ್ಜರಿ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ.
ಹೌದು, ಗೃಹ ಬಳಕೆಗೆ ನೀಡುವ ಫಿಕ್ಸೆಡ್ ಲೈನ್ ಬ್ರಾಡ್ ಬ್ಯಾಂಡ್ ಸೇವೆಗೆ ಸಂಬಂಧಿಸಿದ ಲೈಸೆನ್ಸ್ ಶುಲ್ಕ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಇದರಿಂದಾಗಿ ಗೃಹಬಳಕೆ ಇಂಟರ್ನೆಟ್ ಸೇವೆ ಅಗ್ಗವಾಗಲಿದೆ.
ಈ ಸೇವೆಗಳಿಗೆ ಈಗ ಶೇಕಡ 8 ರಷ್ಟು ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದ್ದು, ಇದು ಇಳಿಕೆಯಾದರೆ ಸಹಜವಾಗಿಯೇ ಅಗ್ಗದ ಬೆಲೆಗೆ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.