ಮೊದಲು ಜನವರಿ 15ರ ಬಳಿಕ ಚಿನ್ನಕ್ಕೆ ಹಾಲ್‌ಮಾರ್ಕ್ ಗುರುತು ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಅದನ್ನು ಮುಂದಿನ ವರ್ಷಕ್ಕೆ ಅಂದರೆ ಜನವರಿ 2021 ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಅನೇಕ ಕಾರಣಗಳಿಂದ ಈ ದಿನಾಂಕ ಮತ್ತೆ ಮುಂದೂಡಿಕೆ ಮಾಡಲಾಗಿದೆ.
ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್ ಕೂಡ ಮುಖ್ಯವಾದ್ದು, ಈ ಹಾಲ್‌ಮಾರ್ಕ್‌ನಿಂದ ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ದತೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಇಂತಹದೊಂದು ಮಾನದಂಡವನ್ನು ಎಲ್ಲಾ ಆಭರಣಗಳಿಗೆ ತರೋದಿಕ್ಕೆ ಸರ್ಕಾರ ಮುಂದಾಗಿತ್ತು. ಈ ಅನುಷ್ಠಾನದ ದಿನಾಂಕವನ್ನೂ ನಿಗಧಿ ಮಾಡಲಾಗಿತ್ತು. ಆದರೆ ಇದೀಗ ಈ ದಿನಾಂಕ ಮುಂದೂಡಿಕೆಯಾಗಿದೆ.
ಮೊದಲು 2021ರ ಜನವರಿ 15ರಿಂದ ಇದು ಜಾರಿಗೆ ಬರಬೇಕಿತ್ತು. ಇದೀಗ ಇದನ್ನು ಬದಲಿಸಲಾಗಿದ್ದು, 1 ಜುಲೈ 2021ರಿಂದ ಜಾರಿಗೆ ಬರಲಿದೆ. ಆಭರಣ ತಯಾರಕರ ಮನವಿ ಮೇರೆಗೆ ಈ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ತಮ್ಮ ಬಳಿ ಇರುವ ಹಳೆಯ ಸ್ಟಾಕ್ ಮಾರಾಟ ಮಾಡುವುದು ಕಡಿಮೆ ಸಮಯದಲ್ಲಿ ಸಾಧ್ಯವಿಲ್ಲ. ಹೀಗಾಗಿ ಇನ್ನಷ್ಟು ಸಮಯ ಬೇಕು ಅಂತಾ ಆಭರಣ ತಯಾರಿಕರು ಸರ್ಕಾರವನ್ನು ಮನವಿ ಮಾಡಿದ್ದ ಬೆನ್ನಲ್ಲೇ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.