ಬಂಗಾರ ಪ್ರಿಯರಿಗೆ ಇಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕ ಕಂಡಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 575 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 1,227 ರೂಪಾಯಿ ಹೆಚ್ಚಾಗಿದೆ.
ಗುರುವಾರ 575 ರೂಪಾಯಿ ಏರಿಕೆ ಕಂಡ ಬಂಗಾರದ ಬೆಲೆ 10 ಗ್ರಾಂಗೆ 49,125 ರೂಪಾಯಿಯಾಗಿದೆ. ಬೆಳ್ಳಿ ಬೆಲೆ 1,227 ರೂಪಾಯಿ ಏರಿಕೆ ಕಾಣುವ ಮೂಲಕ ಕೆ.ಜಿಗೆ 66,699 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,870.50 ಡಾಲರ್ ಪ್ರತಿ ಔನ್ಸ್ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ 25.83 ಡಾಲರ್ ಪ್ರತಿ ಔನ್ಸ್ ಆಗಿದೆ.
ನ್ಯೂಯಾರ್ಕ್ ಸರಕು ವಿನಿಮಯ ಕೇಂದ್ರದಲ್ಲಾದ ಚಿನ್ನದ ಬೆಲೆ ಏರಿಕೆ ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಹಾಗೆ ಡಾಲರ್ ದುರ್ಬಲತೆ ಕೂಡ ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿದೆ. ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 48,550 ರೂಪಾಯಿಯಾಗಿತ್ತು. ಬೆಳ್ಳಿ ಬೆಲೆ ಕೆ.ಜಿಗೆ 65,472 ರೂಪಾಯಿಯಾಗಿತ್ತು.