ಅಮೆರಿಕಾದಲ್ಲಿ ಯಾವುದೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡದ ಕಾರಣ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಮುಂದಿನ ದಿನಗಳಲ್ಲಿ 50 ಸಾವಿರಕ್ಕೆ ಬಂದು ನಿಲ್ಲಬಹುದೆಂದು ಅಂದಾಜಿಸಲಾಗಿದೆ.
ಮಂಗಳವಾರವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಬುಧವಾರ ಆರಂಭಿಕ ವಹಿವಾಟಿನಲ್ಲಿ ಎಂಸಿಎಕ್ಸ್ ನ ಚಿನ್ನದ ಬೆಲೆ 470 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 50,088 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ನಂತ್ರ 646 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ 10 ಗ್ರಾಂಗೆ 50,203 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಬುಧವಾರ ಇಳಿಕೆ ಕಂಡಿದೆ. ಎಂಸಿಎಕ್ಸ್ ವಿನಿಮಯ ಕೇಂದ್ರದಲ್ಲಿ ಬುಧವಾರ ಬೆಳ್ಳಿ ಬೆಲೆ ಶೇಕಡಾ 1.66ರಷ್ಟು ಅಂದ್ರೆ 1007 ರೂಪಾಯಿ ಇಳಿಕೆ ಕಂಡು ಕೆ.ಜಿ.ಗೆ 59,564 ರೂಪಾಯಿಯಾಗಿತ್ತು. ಭಾರತದಲ್ಲಿ ಹಬ್ಬದ ಋತುವಿನಲ್ಲಿ ಚಿನ್ನದ ಬೆಲೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ.