ಕೊರೊನಾ ಎಫೆಕ್ಟ್ ಎಲ್ಲಾ ಉದ್ಯಮಗಳ ಮೇಲೂ ಬಿದ್ದಿದೆ. ಇದಕ್ಕೆ ಚಿನ್ನ – ಬೆಳ್ಳಿಯ ಉದ್ಯಮ ಹೊರತಾಗಿಲ್ಲ. ಲಾಕ್ ಡೌನ್ ನಿಂದಾಗಿ ನೆಲಕಚ್ಚಿ ಹೋಗಿದ್ದ ಚಿನ್ನ – ಬೆಳ್ಳಿ ಉದ್ಯಮಕ್ಕೆ ಮರು ಜೀವ ಬಂದಂತಿದೆ. ಲಾಕ್‌ಡೌನ್ ತೆರವು ಆದಾಗಿನಿಂದಲೂ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ಈ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರೆದಿದೆ.
ಹೌದು, ಚಿನ್ನದ ಬೆಲೆ ಇಂದೂ ಕೂಡ ಏರಿಕೆ ಕಂಡಿದೆ. ಇಂದು 10 ಗ್ರಾಂ ಚಿನ್ನದ ಬೆಲೆ 48,190 ರೂಪಾಯಿಯಿಂದ 48,333 ರೂಪಾಯಿಗೆ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. 1ಕೆ.ಜಿ ಬೆಳ್ಳಿಗೆ 48,800 ಇತ್ತು. ಇಂದು 48,716 ರೂಪಾಯಿಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಚಿನ್ನದ ಬೆಲೆಯನ್ನು ನೋಡೋದಾದ್ರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,360 ರೂಪಾಯಿಯಾದರೆ, 1 ಕೆಜಿ ಬೆಳ್ಳಿ ದರ 48,510 ರೂ. ಆಗಿದೆ. ಚಿನ್ನದ ದರ ಈ ವರ್ಷ ಶೇ. 24ರಷ್ಟು ಏರಿಕೆಯಾಗಿದೆ.