ನವರಾತ್ರಿ ಸಂದರ್ಭದಲ್ಲಿ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 10 ಗ್ರಾಂಗೆ 50,584 ರೂಪಾಯಿಯಾಗಿದೆ. ಚಿನ್ನವು ಒಂದು ತಿಂಗಳಲ್ಲಿ ಹತ್ತು ಗ್ರಾಂಗೆ 5,616 ರೂಪಾಯಿ ಇಳಿಕೆ ಕಂಡಂತಾಗಿದೆ. ಆಗಸ್ಟ್ ನಲ್ಲಿ ಕೆ.ಜಿ.ಗೆ 80,000 ರೂಪಾಯಿಯಾಗಿದ್ದ ಬೆಳ್ಳಿ ಬೆಲೆ ಈಗ 61,250 ರೂಪಾಯಿಗೆ ಇಳಿದಿದೆ.
ವಿದೇಶಿ ಮಾರುಕಟ್ಟೆಗಳ ದುರ್ಬಲ ಬೆಳವಣಿಗೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಂಗಳವಾರ ಇಳಿಕೆ ಕಂಡಿವೆ. ಎಂಸಿಎಕ್ಸ್ ನ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.2 ಶೇಕಡಾ ಇಳಿದು 50,584 ರೂಪಾಯಿ ಆಗಿದೆ. ಬೆಳ್ಳಿ ಪ್ರತಿ ಕೆ.ಜಿ.ಗೆ ಶೇಕಡಾ 0.35ರಷ್ಟು ಇಳಿಕೆ ಕಂಡು 61,882 ರೂಪಾಯಿಯಾಗಿದೆ.
ಡಾಲರ್ ಚೇತರಿಕೆ ಮತ್ತು ಯುಎಸ್ ಪರಿಹಾರ ಪ್ಯಾಕೇಜ್ ಮಾತುಕತೆಗಳ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಗಳು ಕುಸಿದಿವೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಶೇಕಡಾ0.1 ರಷ್ಟು ಇಳಿಕೆ ಕಂಡು 1,898.16 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಶೇಕಡಾ 0.3ರಷ್ಟು ಇಳಿಕೆ ಕಂಡು 24.43 ಡಾಲರ್ ಪ್ರತಿ ಔನ್ಸ್ ಆಗಿದೆ. ದೀಪಾವಳಿ ನಂತ್ರ ಬೆಳ್ಳಿ, ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆಯಿದೆ.