ನೀವೇನಾದರೂ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಬೇಕು ಅಂತಿದ್ದೀರಾ..? ಹಾಗಾದ್ರೆ ಈ ಸುದ್ದಿ ಓದಲೇ ಬೇಕು. ಅಧಿಕೃತ ವೆಬ್ ಸೈಟ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ.
ಹೌದು, ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಯಾವುದೇ ಒಂದು ವ್ಯವಹಾರ ಮಾಡಬೇಕೆಂದರೂ ಆಧಾರ್ ಎಂಬುದು ಬೇಕೇ ಬೇಕು. ಹಾಗಾಗಿ ದೇಶದಲ್ಲಿ ಎಲ್ಲರ ಬಳಿಯೂ ಆಧಾರ್ ಇರಲೇಬೇಕು ಎಂದು ಸರ್ಕಾರ ಹೇಳಿದೆ. ಆಧಾರ್ ಇಲ್ಲದೇ ಇರುವವರು ಆನ್ ಲೈನ್ ನಲ್ಲಿ ಆಧಾರ್ ಗೆ ಅರ್ಜಿ ಸಲ್ಲಿಸುತ್ತಿದ್ದರೆ ಹುಷಾರಾಗಿ, ಎಚ್ಚರಿಕೆಯಿಂದ ಸಲ್ಲಿಸಬೇಕು.
ಆನ್‌ಲೈನ್ ಡೌನ್ ಲೋಡ್ ಅಥವಾ ಡೌನ್ ಲೋಡ್ ಮಾಡಬೇಕೆಂದರೆ ಯುಐಡಿಎಐ ಪೋರ್ಟಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಮಾಡಬೇಕು ಎಂದು ಯುಐಡಿಎಐ ಜನರಿಗೆ ಟ್ವೀಟ್ ಮೂಲಕ ಎಚ್ಚರಿಸಿದೆ. ಜೊತೆಗೆ ಸಾರ್ವಜನಿಕ ಕಂಪ್ಯೂಟರ್ ನಿಂದ ಡೌನ್ ಲೋಡ್ ಮಾಡಿದ್ದರೆ, ಪ್ರಿಂಟ್ ಔಟ್ ತೆಗೆದ ನಂತರ ಆ ಪೋರ್ಟಲ್ ಹಾಗೂ ಡೌನ್ ಲೋಡ್ ಮಾಡಿದ ಫೈಲ್ ಅನ್ನು ಅಳಿಸಲು ಮರೆಯಬೇಡಿ ಎಂದು ಹೇಳಿದೆ.