ನೀವು ಪಡಿತರ ಚೀಟಿ ಹೊಂದಿಲ್ವಾ..? ಇದಕ್ಕಾಗಿ ಚಿಂತೆ ಪಡುವ ಅಗತ್ಯ ಇಲ್ಲ. ಆನ್ಲೈನ್ನಲ್ಲಿಯೇ ಪಡಿತರಕ್ಕೆ ಅರ್ಜಿ ಸಲ್ಲಿಸಿ, ಅಲ್ಲಿಯೇ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.
ಹೌದು, ಈಗ ಯಾವುದೇ ರಾಜ್ಯದಲ್ಲಿ ಪಡಿತರವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಪಡಿತರ ಚೀಟಿ ಹೊಂದಿಲ್ಲದೇ ಇದ್ದಲ್ಲಿ ಆನ್ಲೈನ್ ಮೂಲಕ ಪಡಿತರ ಚೀಟಿ ಪಡೆಯಬಹುದಾಗಿದೆ. ಆಯಾಯ ರಾಜ್ಯಗಳು ವೆಬ್ಸೈಟ್ ಅನ್ನು ತೆರೆದಿದ್ದು ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ ಎರಡು ಕಾರ್ಡ್ಗಳಿವೆ. ಎಪಿಎಲ್ ಹಾಗೂ ಬಿಪಿಎಲ್. ಆದಾಯಕ್ಕನುಗುಣವಾಗಿ ಕಾರ್ಡ್ ವಿಂಗಡಣೆಯಾಗುತ್ತದೆ.
ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್ಸೈಟ್ಗೆ ಹೋದರೆ ಅಲ್ಲಿ ರೇಷನ್ ಕಾರ್ಡ್ಗೆ ನೀಡಬೇಕಾದ ವಿವರ ಹಾಗೂ ದಾಖಲೆ ಕೇಳುತ್ತದೆ. ಸರಿಯಾದ ದಾಖಲೆ ನೀಡಿ ಅರ್ಜಿ ತುಂಬಬೇಕು. ನಿಮ್ಮ ಎಲ್ಲಾ ದಾಖಲೆ ಸರಿ ಇದ್ದರೆ, ಅದನ್ನು ಪರಿಶೀಲನೆ ಮಾಡಿ ಕೇವಲ 30 ದಿನದಲ್ಲಿ ನಿಮ್ಮ ರಾಜ್ಯದ ಪಡಿತರ ಚೀಟಿ ನೀಡಲಾಗುತ್ತದೆ.